ಸಂಘಟನೆಗಳು ಪ್ರಸ್ತುತ ಜಗತ್ತಿನಲ್ಲಿ ಅಪಾಯಕಾರಿ : ಡಾ.ವಿಶ್ವನಾಥ್

ತಿಪಟೂರು

         ಕೆಲವೊಂದು ಸಂಘಟನೆಗಳು ಪ್ರಸ್ತುತವಾಗಿ ಜಗತ್ತಿನಲ್ಲಿ ಮತ್ತು ನಮ್ಮ ದೇಶದಲ್ಲಿ ಪಿಡುಗಾಗಿ ಕಾಡಿತಿದ್ದು, ಆತಂರಿಕ ಹಾಗೂ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಾಗಿ ಹಲವು ಕೃತ್ಯಗಳನ್ನು ನಡೆಸುತ್ತಾ ಬಂದಿವೆ ಎಂದು ನೊಣವಿನಕೆರೆ ಸ.ಪ್ರ.ದ ಕಾಲೇಜು ಪ್ರಾಧ್ಯಪಕ ಡಾ.ವಿಶ್ವನಾಥ್ ತಿಳಿಸಿದರು

        ನಗರದ ಕಲ್ಪತರು ವಿದ್ಯಾಸಂಸ್ಥೆ(ರಿ), ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ “ಭಯೋತ್ಪಾದನೆ” ಎಂಬ ವಿಶೇಷ ಉಪನ್ಯಾಸ ವಿಷಯವಾಗಿ ಮಾತನಾಡುತ್ತಾ ಅದರ ಇತಿಹಾಸ, ಕಾರಣಗಳು, ಬಗೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ದಾಬೋಲ್ಕರ್, ಕಲ್ಬುರ್ಗಿ, ಗೌರಿಲಂಕೇಶ್, ಮುಂತಾದವರ ಹತ್ಯೆಯ ಹಿಂದೆ ಸಿದ್ದಾಂತ, ಎಡ ಮತ್ತು ಬಲ ಪಂತೀಯ ವಾದಗಳು ಕಾರಣವಾಗಿದ್ದು, ಧರ್ಮ ಧರ್ಮೀಯರ ನಡುವೆ ಸಂಘರ್ಷಗಳು ನಡೆಯಲು ಕಾರಣವಾಗಿವೆ.

      ಇಂತಹ ಆತಂಕಕಾರಿ ಸನ್ನಿವೇಶಗಳು ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದು, ದೇಶ ಮೊದಲು ಎಂಬುದನ್ನು ಎಲ್ಲರೂ ತಿಳಿಯಬೇಕಾಗಿದೆ. ಯಾರೇ ಆಗಲಿ ಮಾತಾಡುವ ಸ್ವಾತಂತ್ರ್ಯವಿದೆಯೆಂದು ಅದನ್ನು ವಿಪರೀತಕ್ಕೆ ಬಳಸಿಕೊಂಡರೆ ಅನಾಹುತಗಳಾಗುತ್ತವೆ. ಧರ್ಮ, ಜಾತಿ, ಜನಾಂಗ, ದೇಶ, ಪ್ರದೇಶ, ಭಾಷೆ ಮುಂತಾದವುಗಳನ್ನು ಬದಿಗಿಟ್ಟು ಎಲ್ಲರು ಸೌಹಾರ್ದಯುತವಾಗಿ ಬಾಳುವಂತಾಗಬೇಕು ಎಂದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಸ್.ಬಿ.ಬಸವರಡ್ಡಿ ಮೊದಲು ಮನೆ, ನಂತರ ಪರಿಸರ ಸ್ವಚ್ಛವಾಗಿರಬೇಕು, ಆಗ ಮಕ್ಕಳು ಸರಿದಾರಿಯಲ್ಲಿ ನಡೆಯುತ್ತಾರೆ. ಇದು ಸಮತೋಲನ ಕಳೆದುಕೊಂಡರೆ ಅಶಿಸ್ತು, ಅನಾಗರೀಕ ವರ್ತನೆ ಕಂಡು ಬಂದು ಅವರು ಸಮಾಜಕ್ಕೆ ಹಾಗೂ ದೇಶಕ್ಕೆ ಕಂಟಕರಾಗುತ್ತಾರೆ ಎಂದರು.

        ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕೆ.ಕುಮಾರಸ್ವಾಮಿ ಮಾತಾಡುತ್ತಾ ಪ್ರತಿದಿನ ನಾವು ಮಾಡುವ ಪಠ್ಯದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದಲೂ ಮಾಹಿತಿ ಪಡೆದರೆ ವಿದ್ಯಾರ್ಥಿಗಳು ಹಾಗೂ ನಾವು ಪುನರ್ ಮನನಕ್ಕೊಳಗಾಗುತ್ತೇವೆ. ಮತ್ತೊಂದು ದೃಷ್ಠಿಕೋನದಲ್ಲಿ ಚಿಂತಿಸಲು ಸಾಧ್ಯವೆಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link