ಒಂದೇ ದಿನಕ್ಕೆ ಸುಮಾರು 8 ಕೋಟಿ ಸಂಗ್ರಹ
ಬೆಂಗಳೂರು
ಕರ್ನಾಟಕ ಪೊಲೀಸ್ ಇಲಾಖೆ ವತಿಯಿಂದ ಘೋಷಣೆಮಾಡಲಾಗಿದ್ದ ದಂಡ ರಿಯಾಯಿತಿ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಇಲಾಖೆ ತಿಳಿಸಿದ್ದು . ಸಂಚಾರ ಅಪರಾಧದ ದಂಡದ ಮೇಲೆ ರಾಜ್ಯ ಸರ್ಕಾರವು 50 % ರಿಯಾಯಿತಿಯನ್ನು ಘೋಷಿಸಿದ ಒಂದು ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ ಇಲಾಖೆ ಸರಿಸುಮಾರು 5 ಕೋಟಿ ರೂ.ಗೂ ಹೆಚ್ಚು ದಂಡವನ್ನು ಸಂಗ್ರಹಿಸಿದೆ. ಇನ್ನು ಪೇಟಿಎಂ ಮೂಲಕ ಸುಮಾರು 3,23,68,900 ರೂ.ಗಳನ್ನು ಪೇಟಿಎಂ ಮೂಲಕ ಪಾವತಿಸಲಾಗಿದೆ’ ಎಂದು ಬೆಂಗಳೂರಿನ ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ. ಶುಕ್ರವಾರ ಸಂಜೆ 7.55ರ ವೇಳೆಗೆ ಒಟ್ಟು 2,01,828 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ.
ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ಕರ್ನಾಟಕ ಸರ್ಕಾರವು ಶೇಕಡ 50% ರಷ್ಟು ರಿಯಾಯಿತಿಯನ್ನು ನೀಡಿದ್ದು, ದಿನಾಂಕ: 11.02.2023 ರೊಳಗೆ ದಂಡ ಪಾವತಿಸಿ ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ. pic.twitter.com/za88qKQqGq
— Kala Krishnaswamy, IPS DCP Traffic East (@DCPTrEastBCP) February 3, 2023
ರಿಯಾಯಿತಿ ಆಫರ್ ನಲ್ಲಿ ದಂಡ ಪಾವತಿಗೆ ಫೆಬ್ರವರಿ 11 ಕೊನೆಯ ದಿನಾಂಕವಾಗಿದ್ದು ಸಾರ್ವಜನಿಕರು ಉಪಯೋಗಿಸಿಕೊಳ್ಳಲ್ಲು ಆಯುಕ್ತರು ತಿಳಿಸಿದ್ದಾರೆ . ಈ ವಿಚಾರವಾಗಿ ಟ್ವೀಟ್ ಮಾಡಿರುವ ಬೆಂಗಳೂರು ಪೂರ್ವ ಡಿಸಿಪಿ (ಟ್ರಾಫಿಕ್ ವಿಭಾಗ), ‘ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ಕರ್ನಾಟಕ ಸರ್ಕಾರವು ಶೇಕಡ 50% ರಷ್ಟು ರಿಯಾಯಿತಿಯನ್ನು ನೀಡಿದ್ದು, ದಿನಾಂಕ: 11.02.2023 ರೊಳಗೆ ದಂಡ ಪಾವತಿಸಿ ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ’ ಎಂದು ತಿಳಿಸಿದ್ದಾರೆ.