ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪಣತೊಟ್ಟ ಸರ್ಕಾರ..!

ಟ್ರಾಫಿಕ್ ಕಂಟ್ರೋಲ್ ಗೆ 10 ಸ್ಥಳಗಳನ್ನು ಪಟ್ಟಿ ಮಾಡಿದ ಪೊಲೀಸರು

ಹಿರಿಯ ಅಧಿಕಾರಿಗಳಿಂದ ಬೆಂಗಳೂರು ಸಿಟಿ ರೌಂಡ್ಸ್.

ಸಲಿಕಾನ್ ಸಿಟಿ ಜನರಿಗೆ ಇನ್ನದಾರೂ ಸಿಗುತ್ತ ಮುಕ್ತಿ..!

ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ಅನೇಕ ವರ್ಷಗಳಿಂದ ಸಿಲಿಕಾನ್ ಸಿಟಿ ಜನರು ಟ್ರಾಫಿಕ್ ನಿಂದ ಕಂಗೆಟ್ಟಿದ್ದರೂ ಸರರ್ಕಾರ ಸರಿಯಾದ ಕ್ರಮ ಕೈಗೊಂಡಿರಲಿಲ್ಲ ಆದರೆ, ಟ್ರಾಫಿಕ್ ಕಂಟ್ರೋಲ್ ಮಾಡಬೇಕು ಎಂದು ಪಿಎಂ ಮೋದಿ ರಾಜ್ಯ ಸರ್ಕಾರಕ್ಕೆ 6 ತಿಂಗಳ ಡೆಡ್ ಲೈನ್ ಕೊಟ್ಟಿದ್ದೇ ತಡ. ರಾಜ್ಯ ಸರ್ಕಾರ ಸಖತ್ ಅಲರ್ಟ್ ಆಗಿದ್ದು. ಸಾಲು ಸಾಲು ಮೀಟಿಂಗ್ ಮಾಡಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಸುತ್ತಿದೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಸಿಟಿ ರೌಂಡ್ಸ್ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ನೂತನ ತಂತ್ರಜಾÐನದ ಅವಶ್ಯಕತೆಯ ಬಗ್ಗೆ ಪ್ರಜಾ ಪ್ರಗತಿ ಪತ್ರಿಕೆಯು ಸಂಕ್ಷಿಪ್ತವಾಗಿ ವರದಿ ಮಾಡಿತ್ತು. ಇದರ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಬೆಂಗಳೂರುನ್ನು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಬಿಟಿ ಸಿಟಿ. ಎಂಬ ವಿವಿದ ಹೆಸರುಗಳಿಂದ ಖ್ಯಾತಿ ಪ್ರಖ್ಯಾತಿಯನ್ನು ಪಡೆದಿದ್ದರೂ, ಇಲ್ಲಿನ ಟ್ರಾಫಿಕ್ ಸಮಸ್ಯೆ ಮಾತ್ರ ಜನರಿಗೆ ಸಾಕಪ್ಪಾ ಸಾಕು ಎನ್ನಿಸಿಬಿಟ್ಟಿದೆ. ಅದಕ್ಕೆ ಕಾರಣಗಳು ನೂರಾರಿದೆ. ಇದೇ ಸಂಚಾರ ದಟ್ಟಣೆ ನಿಯಂತ್ರಣಯನ್ನು ನಿಯಂತ್ರಣ ಮಾಡಬೇಕು ಎಂದು ಪ್ರಧಾನಿ ಮೋದಿ ರಾಜ್ಯ ಸರ್ಕಾರಕ್ಕೆ 6 ತಿಂಗಳ ಡೆಡ್ ಲೈನ್ ನೀಡಿದ್ದು. ಸರ್ಕಾರ ಹೈ ಅಲರ್ಟ್ ಆಗಿದ್ದು, ಸಾಲು ಸಾಲು ಸಭೆ ನಡೆಸಿ ಚರ್ಚೆ ನಡೆಸಲಾಗ್ತಿದೆ, ಇನ್ನಾದರೂ ಇದಕ್ಕೆ ಪರಿಹಾರ ಸಿಗುತ್ತಾ ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಟ್ರಾಫಿಕ್ ಕಂಟ್ರೋಲ್ ಬಗ್ಗೆ ಚರ್ಚೆ : ಕೆಲವು ದಿನಗಳ ಹಿಂದೆ ನಗರದಲ್ಲಿ ಆಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಕುರಿತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಬಿಎಂಪಿ, ಬಿಡಬ್ಲ್ಯೂ ಎಸ್.ಎಸ್.ಬಿ, ಬೆಸ್ಕಾಂ, ಸ್ಮಾರ್ಟ್ ಸಿಟಿ ಸೇರಿದಂತೆ, ನಗರ ಪೆÇಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಆಯಾ ಅಧಿಕಾರಿಗಳಿಗೆ ಟ್ರಾಫಿಕ್ ಕಂಟ್ರೋಲ್ ಗೆ ಕೈಗೊಳ್ಳಬೇಕಾದ ಕ್ರಮದ ಕುರಿತು ಜವಾಬ್ದಾರಿಗಳನ್ನು ನೀಡಿದ್ದಾರೆ. ಅಲ್ಲದೇ ಸೋಮವಾರ ಕೂಡ ಸಂಚಾರ ವಿಭಾಗ ಜಂಟಿ ಪೆÇಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದಲ್ಲಿ ಟ್ರಾಫಿಕ್ ಇನ್ಸ್ ಪೆಕ್ಟರ್ ಗಳ ಸಭೆಯನ್ನು ಮಾಡಲಾಗಿತ್ತು. ಈ ಸಭೆಯಲ್ಲಿ ರಸ್ತೆ ರಿಪೇರಿ ಕಾರ್ಯ, ಮಳೆಯಿಂದ ಸಮಸ್ಯೆ ಆಗುತ್ತಿರುವ ಪ್ರದೇಶಗಳನ್ನು ಗರುತಿಸುವುದು. ಎಲ್ಲಿ ರಸ್ತೆ ಗುಂಡಿ ಆಗಿದೆ ಎಂದು ಚರ್ಚೆ ಮಾಡಿ ಅಂತಹ ಸ್ಥಳಗಳನ್ನು ಸಂಬಂಧ ಪಟ್ಟ ಇಲಾಖೆಗೆ ಗುರುತಿಸಿ ಕೊಟ್ಟಿದ್ದರೆ, ಅಲ್ಲದೇ ಸಂಚಾರ ಪೆÇಲೀಸರಿಂದ ನೀಡಬೇಕಾದ ಸಹಕಾರದ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಮಂಗಳವಾರ ರಾತ್ರಿ ಸಿಟಿ ರೌಂಡ್ಸ್: ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ, ನಗರ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಬಿಡಿಎ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಂಗಳವಾರ ರಾತ್ರಿ 10 ಗಂಟೆಗೆ ಸಿಟಿ ರೌಂಡ್ಸ್ ನಡೆಸಿದ್ದಾರೆ. ನಗರದಲ್ಲಿ ಹೆಚ್ಚು ಸಂಚಾರಿ ದಟ್ಟಣೆಯಿರುವ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದ್ದು, ಯಾವ ಇಲಾಖೆಯಿಂದ ಏನೇನು ಕೆಲಸ ಆಗಬೇಕು ಎಂಬುದರ ಬಗ್ಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದ್ದಾರೆ

ಸ್ಥಳಗಳನ್ನು ಗುರುತಿಸಿರುವ ಪಟ್ಟಿ ಸಿಎಂಗೆ ಸಲ್ಲಿಕೆ : ಮುಂಗಾರುಮಳೆ ಸಂದರ್ಭ ಇರೋದರಿಂದ ಮೊದಲ ಆದ್ಯತೆಯಾಗಿ ಎಲ್ಲೆಲ್ಲಿ ನೀರು ನಿಲುತ್ತದೆಯೋ ಆ ರಸ್ತೆಯ ಸಮಸ್ಯೆ, ಹಾಗೂ 50 ಸ್ಥಳಗಳನ್ನ ಗುರುತಿಸಿ ಪಟ್ಟಿಯನ್ನ ಸಿಎಂ ಮತ್ತು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ಎರಡನೇ ಆದ್ಯತೆಯಾಗಿ 54 ಸ್ಥಳಗಳ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಅದನ್ನ ಸರಿ ಪಡಿಸುವಂತೆ ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ.


ಬೆಂಗಳೂರಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಿಂದ ಕೂಡಿರುವ 10 ಜಂಕ್ಷನ್ ಗಳನ್ನು ಸಂಚಾರ ಪೆÇಲೀಸರು ಗುರುತಿಸಿದ್ದು ಅಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂದರೆ ಹೆಚ್ಚು ಟ್ರಾಫಿಕ್ ಸಂಭವಿಸುವ ಸಿಲ್ಕ್ ಬೋರ್ಡ್ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಹೆಬ್ಬಾಳ, ಜಯದೇವ ಸೇರಿದಂತೆ ಪ್ರಮುಖ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೇ ಮಂಗಳವಾರ ರಾತ್ರಿ 10.30 ಕ್ಕೆ ಬಿಬಿಎಂಪಿ, ಬಿಡಬ್ಲ್ಯೂ ಎಸ್ ಎಸ್ ಬಿ, ಬೆಸ್ಕಾಂ, ಸ್ಮಾರ್ಟ್ ಸಿಟಿ ಸೇರಿದಂತೆ, ನಗರ ಪೊಲೀಸ್ ಹಿರಿಯ ಅಧಿಕಾರಿಗಳು ಸಿಟಿ ರೌಂಡ್ಸ್ ನಡೆಸಲಿದ್ದು, ಗೊರಗುಂಟೆಪಾಳ್ಯ, ಹೆಬ್ಬಾಳ, ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಜಂಕ್ಷನ್ ಗೆ ತೆರಳಿ ಅಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತು ಸ್ಥಳದಲ್ಲೇ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ.

– ಡಾ.ಬಿ.ಆರ್.ರವಿಕಾಂತೇಗೌಡ, ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರು.

ಸಾರ್ವಜನಿಕರ ಅಭಿಪ್ರಾಯ :
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿ, ಟ್ರಾಫಿಕ್ ದಟ್ಟಣೆ ತಡೆಗಟ್ಟುವ ವಿಚಾರಕ್ಕೆ ಸಂಬಂಧ ಪಟ್ಟಂತೆ ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರ ನೇತೃತ್ವದಲ್ಲಿ ಸಂಚಾರಿ ವಿಭಾಗದ ಹಿರಿಯ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರಿನ ಜನರು ಹೈರಾಣಾಗಿದ್ದು, ಈ ಮೂಲಕವಾದ್ರೂ ಟ್ರಾಫಿಕ್ ಸಮಸ್ಯೆ ಬಗೆ ಹರಿದರೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದು ಕಾದು ನೋಡಬೇಕಿದೆ. ಎನ್ನುತ್ತಾರೆ ಸಾರ್ವಜನಿಕರು.