ಬೆಂಗಳೂರು:
ಇಂದು ಸಂಜೆ 4 ಗಂಟೆಗೆ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಹಗರಣಗಳ ದಾಖಲೆಯನ್ನು ನಮ್ಮ ಮುಖಂಡರಿಂದ ಬಿಡುಗಡೆ ಮಾಡಲಾಗುವುದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಪರ್ಸೆಂಟೇಜ್ ಜನಕ ಬಿಎಸ್ವೈ; ಹೆಚ್ಡಿಕೆ ಆರೋಪ
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ನಿಮ್ಮ ಕುಟುಂಬದವರು ಮಾಡಿರುವಷ್ಟು ಭೂಹಗರಣವನ್ನು ಯಾರೂ ಮಾಡಿಲ್ಲ ಎಂದು ದೂರಿದ ಅವರು, ಯಡಿಯೂರಪ್ಪನ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ. ರಾಜ್ಯದಲ್ಲಿ ಅಧಿಕಾರ ನಿಮ್ಮದಿರಬಹುದು ಆದರೆ, ಕೇಂದ್ರದಲ್ಲಿ ಅಧಿಕಾರ ನಮ್ಮದಿದೆ. ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ