ಬೆಂಗಳೂರು:
ಭೀಕರ ಪ್ರವಾಹಕ್ಕೆ ಕೊಡಗು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು, ಸಂತ್ರಸ್ತರ ಬಳಿ ಬಿಸ್ಕಿಟ್ ಪ್ಯಾಕೆಟ್ ಎಸದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಹಾಸನ ಜಿಲ್ಲೆಯ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಸಚಿವರು ಹಾಗೂ ಅವರ ಆಪ್ತರು ಬಿಸ್ಕೆಟ್ ಪ್ಯಾಕೆಟ್‌ಗಳ ಬಾಕ್ಸ್ ಹೊತ್ತು ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮೊದಲು ನಿರಾಶ್ರಿತರ ಕೈಗೆ ಬಿಸ್ಕಿಟ್ ಪ್ಯಾಕೆಟ್ ನೀಡಿದ ಸಚಿವ ರೇವಣ್ಣ, ಬಳಿಕ ಬಿಸ್ಕಿಟ್ ಪ್ಯಾಕೆಟ್‌ಗಳನ್ನು ನಿರಾಶ್ರಿತರ ಬಳಿ ಎಸೆಯಲಾರಂಭಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರವಾಹ ಪೀಡಿತರ ಜತೆಗಿನ ಸಚಿವ ರೇವಣ್ಣ ಅವರ ವರ್ತನೆ ನನ್ನ ಗಮನಕ್ಕೆ ಬಂದಿಲ್ಲ. ಅವರು ಆ ರೀತಿ ಮಾಡಿರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಚಿವರನ್ನ ಸಮರ್ಥಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ