ಮಡಿಕೇರಿ:
ಕೊಡಗಿನ ನಿರಾಶ್ರಿತರಿಗೆ ತುರ್ತು ಇ-ಟಾಯ್ಲೆಟ್ಗಳ ಅವಶ್ಯಕತೆಯಿದ್ದು, ಅವುಗಳನ್ನು ಕಳಿಸಿಕೊಡುವಂತೆ ಬಿಜೆಪಿ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ಈಗಾಗಲೇ ಬಟ್ಟೆ, ಆಹಾರ, ದಿನ ಬಳಕೆ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಜನ ಕಳುಹಿಸಿಕೊಟ್ಟಿದ್ದಾರೆ, ಅದೇ ರೀತಿ ಪ್ರತಿ ಶಿಬಿರಕ್ಕೆ ಕನಿಷ್ಟ ಐದಾದರೂ ಇ-ಟಾಯ್ಲೆಟ್ ಅವಶ್ಯಕತೆ ಇದೆ. ಇದರಿಂದ ಜನರು ಬಹಿರ್ದಸೆಗೆ ಹೋಗಲು ತೊಂದರೆ ಪಡುವುದನ್ನು ತಡೆಯುವುದರ ಜೊತೆಗೆ ಅದರಿಂದ ಉಂಟಾಗಬಹುದ ಆರೋಗ್ಯ ಸಮಸ್ಯೆಗಳನ್ನೂ ತಡೆಯಬಹುದು ಎಂಬುದು ಅವರ ಕಾಳಜಿ.
ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವ ಅವರು, ನಿರಾಶ್ರಿತರ ಶಿಬಿರಗಳಿಗೆ ಶೀಘ್ರವಾಗಿ ಇ-ಟಾಯ್ಲೆಟ್ನ ಅವಶ್ಯಕತೆ ಇದೆ ಎಂಬುದನ್ನು ಮನಗೊಂಡು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
