ಸಂತ್ರಸ್ತರಿಗೆ ಹಣದ ಅವಶ್ಯಕತೆಯಿದೆ..!?

ಮಡಿಕೇರಿ:

       ಕೊಡಗಿನ ನೆರೆ ಸಂತ್ರಸ್ತರಿಗೆ ಬೇಕಾದ ಕುಡಿಯುವ ನೀರು, ಊಟ, ಹೊದಿಕೆ, ಔಷಧ ಎಲ್ಲವನ್ನೂ ಜಿಲ್ಲಾಡಳಿತ ಒದಗಿಸಿದೆ.   ಆದ್ದರಿಂದ ಅವರಿಗೆ ಈಗ ಅವಶ್ಯವಿರುವ ಹಣದ ಸಹಾಯ ನೀಡಿ ಜೀವನ ಕಟ್ಟಿಕೊಳ್ಳಲು ನೆರವಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.

      ಕೊಡಗಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಭವಿಷ್ಯದಲ್ಲಿ ಮನೆ ಕಟ್ಟಿಕೊಳ್ಳಲು ಹಣದ ಅವಶ್ಯತೆ ಇದೆ. ಹೀಗಾಗಿ ನಿಮ್ಮ ಸಹಾಯ ಹಸ್ತವನ್ನು ಹಣದ ರೂಪದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅಥವಾ ಡಿಸಿ ಕಚೇರಿಯಲ್ಲಿ ಯಾರೆಲ್ಲ ಮನೆ ಕಳೆದುಕೊಂಡಿದ್ದಾರೆ ಅವರ ವಿವರ ಸಿಗುತ್ತದೆ. ಆ ವಿವರ ನೋಡಿ ನೀವೇ ಖುದ್ದಾಗಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿ ಕೊಳ್ಳುವುದಕ್ಕೆ ಸಹಾಯ ಮಾಡಿ ಎಂದು ಸಾ ರಾ ಮಹೇಶ್ ಮನವಿ ಮಾಡಿದ್ದಾರೆ.

      ನಿನ್ನೆ ರಾತ್ರಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜೀರೋ ಟ್ರಾಫಿಕ್ ನಲ್ಲಿ ಸೇನಾ ಪಡೆಯನ್ನು ಕಲ್ಪಿಸಲಾಗಿದೆ. ಈಗಾಗಲೇ 4 ಸೇನಾ ಪಡೆ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು ಅದರೊಂದಿಗೆ ವಾಯುಪಡೆ, ನೌಕಾಪಡೆ, ಪೊಲೀಸ್ ಇಲಾಖೆ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ.

      ಈಗಾಗಲೇ 3,150 ನಿರಾಶ್ರಿತರನ್ನು ಸರ್ಕಾರ ರಕ್ಷಣೆ ಮಾಡಿದೆ. 450 ರಿಂದ 500 ಜನರು ಇನ್ನೂ ಸಂಕಷ್ಟದಲ್ಲಿದ್ದು ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. 31 ಆಹಾರ ಕೇಂದ್ರಗಳಿವೆ ಇದರಿಂದಾಗಿ ಸ್ವಲ್ಪ ಮಟ್ಟಿಗೆ ಜನರ ಆತಂಕ ದೂರವಾಗಿದೆ. ಎಂದು ಅವರು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap