ಸಂಧ್ಯಾ ಕಾಲದಲ್ಲಿ ಮಾತಾ ಪಿತೃಗಳ ಬಗ್ಗೆ ಉದಾಸೀನ ಮಾಡಬೇಡಿ.

ತುಮಕೂರು

            ಹೆತ್ತು, ಸಾಕಿ ಸಲುಹಿದ ತಂದೆ ತಾಯಿಗಳನ್ನು ಸಂಧ್ಯಾಕಾಲದಲ್ಲಿ ಉದಾಸೀನ ಮಾಡಿ ಮನೆಯಿಂದ ಹೊರ ಹಾಕುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರ ಬದಲು ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಂಡು ಉತ್ತಮ ಸಮಾಜದ ಸೃಷ್ಟಿಗೆ ಕಾರಣಕರ್ತರಾಗ ಬೇಕೆಂದು ಸಣ್ಣ ಕೈಗಾರಿಕ ಸಚಿವ ಶ್ರೀನಿವಾಸ್ ಕಿವಿಮಾತು ಹೇಳಿದರು.

             ವೈಶ್ಯ ಕೋ-ಆಪರೇಟಿವ್ ಬ್ಯಾಂಕಿನ 40ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಪ್ರಯುಕ್ತ ತುಮಕೂರು ನಗರದ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ|| ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ಬ್ಯಾಂಕಿನ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಚಿವರು ಹಿರಿಯ ಸದಸ್ಯರ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ ತಿಳಿಸಿದರು.

             ಮುಖ್ಯ ಅತಿಥಿಗಳಾಗಿ ಆಗಿಮಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ ದಿನಗಳಲ್ಲಿ ಬ್ಯಾಂಕು ಆರ್ಥಿಕ ನೆರವು ನೀಡಿ ಸಂಸ್ಥೆಯನ್ನು ವಿಸ್ತರಿಸಲು ಸಾಧ್ಯವಾಯಿತು ಎಂದು ಬ್ಯಾಂಕಿನ ಸಹಾಯವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

            ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕಗಳಿಸುವುದೇ ಪ್ರಮುಖ ಗುರಿ ಎಂದು ಭಾವಿಸಿದ್ದಾರೆ. ಇದರಲ್ಲಿ ವಿಫಲವಾದರೇ ಮಾನಸಿಕ ಖಿನ್ನತೆಗೆ ಒಳಗಾಗಿ ಅವಘಡಗಳನ್ನು ಮಾಡಿಕೊಳ್ಳುತ್ತಿರುವುದು ಕಾಣತ್ತಿದ್ದೇವೆ. ಇದು ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ. ಇದರ ಬದಲು ತಮಗೆ ಇಷ್ಟಪಟ್ಟ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಆಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಸಮಾಜದ ಸತ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಶಾಸಕರು ಹೇಳಿದರು.

            ಇದಕ್ಕು ಮುನ್ನ ಸಮಾರಂಭದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ತುಮಕೂರು ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ತಮ್ಮ ವಿದ್ಯಾರ್ಥಿ ಜೀವನದ ಕಷ್ಟಕಾರ್ಪಣ್ಯಗಳನ್ನು ತಿಳಿಸಿ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಬೇಕು ಕೇವಲ ಅಂಕಗಳನ್ನು ಗಳಿಸುವ ಆಸೆಯನ್ನು ಬೆನ್ನಹತ್ತಿ ಹೋಗದೇ ಸಮಾಜ-ಪರಿಸರವನ್ನು ಅರ್ಥ ಮಾಡಿಕೊಂಡು ಆದರ್ಶರಾಗಿ ಜೀವನ ನಡೆಸಬೇಕು ಎಂದು ಹೇಳಿದರು.

            ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 48ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಜೊತೆಗೆ 5 ಮಂದಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

              ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಗೋವಿಂದರಾಜು, ಬ್ಯಾಂಕು ಆರ್ಥಿಕ ವ್ಯವಹಾರವನ್ನು ನಡೆಸುವುದರ ಜೊತೆಗೆ ಸದಸ್ಯರ ಕ್ಷೇಮಾಭಿವೃದ್ಧಿಗೆ ಹೆಚ್ಚು ಒತ್ತುಕೊಡುತ್ತಿದೆ. ಹಿರಿಯ ಸದಸ್ಯರುಗಳಿಗೆ ಗೌರವಿಸುವುದು ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸುವ ಮೂಲಕ ಅವರನ್ನು ಉತ್ತೇಜಿಸುವುದರಿಂದ ಅವರು ಸಮಾಜಕ್ಕೆ ಮಾದರಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಸ್.ರಮೇಶ್ ಅವರು ಪ್ರಾಸ್ತವಿಕ ಮತ್ತು ಸ್ವಾಗತ ಭಾಷಣ ಮಾಡಿದರು.

              ಈ ಸಮಾರಂಭದಲ್ಲಿ ವೈಶ್ಯ ಜನಾಂಗದ ಅಂಗ ಸಂಸ್ಥೆಗಳ ಅಧ್ಯಕ್ಷರುಗಳಾದ ಟಿ.ಎಸ್.ಶಶಿಕುಮಾರ್, ಸಿ.ಆರ್.ಮೋಹನ್ ಕುಮಾರ್, ಆರ್.ಎಲ್.ರಮೇಶ್‍ಬಾಬು, ರತ್ನ ರವೀಂದ್ರ, ಗೀತಾ ಮಲ್ಲಿಕಾರ್ಜುನ್, ಸಿ.ಕೆ.ಬ್ರಹ್ಮಾನಂದ, ಜಿ.ಕೆ.ಲೋಕೇಶ್, ಎಸ್.ಆರ್.ಹರೀಶ್ ಮುಂತಾದವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.ಈ ಸಮಾರಂಭದ ಪ್ರಾರ್ಥನೆಯನ್ನು ನಿರ್ದೇಶಕರಾದ ಜಯಶ್ರೀ ಉಮೇಶ್ ನಡೆಸಿಕೊಟ್ಟರು.

               ಬ್ಯಾಂಕಿನ ನಿರ್ದೇಶಕ ಕೆ.ವೆಂಕಟರಾಜು ಇವರು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿ.ಪಿ.ಕೃಷ್ಣಮೂರ್ತಿ ನಡೆಸಿಕೊಟ್ಟರು. ಈ ಸಮಾರಂಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link