ಸಂಭ್ರಮದ ಎಳೆ ಗೌರಿ ಹಬ್ಬ

ಹೊನ್ನಾಳಿ:

    ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಸೋಮವಾರ ಎಳೆ ಗೌರಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಪುರಾಣ ಪಠಣಕಾರರಾದ ಹನುಮಂತಪ್ಪ ದೇವಾಂಗದ, ಭವಾನಿ ರಾವ್, ಅಂಬಿಗರ ಹನುಮಂತಪ್ಪ ಇತರರು ಎಳೆ ಗೌರಿ ಕುರಿತು ಇರುವ ಪುರಾಣ ಕಥೆಯನ್ನು ಪಠಣ ಮಾಡಿದರು. ನಂತರ ಗ್ರಾಮದ ಸಂಪ್ರದಾಯದಂತೆ ಚರಕವನ್ನಿಟ್ಟು ಪೂಜೆ ಸಲ್ಲಿಸಿ ಹತ್ತಿಯಿಂದ ನೂಲನ್ನು ತೆಗೆಯಲಾಯಿತು.

      ಗ್ರಾಮದ ಹಾಗೂ ಊರ ಹೊರಗಿನಿಂದ ಬಂದ ಹೆಣ್ಣು ಮಕ್ಕಳು ಗೌರಿ ಮಂಟಪಕ್ಕೆ ತೆರಳಿ ಗೌರಿಯನ್ನು ಕುರಿತ ಗೀತೆಗಳನ್ನು ಹಾಡಿ ಸಂಂಭ್ರಮಿಸಿದರು. ಸಂಪ್ರದಾಯದಂತೆ ಚರಕದಿಂದ ತೆಗೆದ ಹತ್ತಿಯ ಎಳೆಯನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು.
ಈ ಸಂದರ್ಭದಲ್ಲಿ ರಂಗಪ್ಪ, ನಾಗರಾಜರಾವ್, ಅಶೋಕ್‍ರಾವ್, ಸುರೇಶ್ ಬಿಸಲೇರಿ, ಕಾಳಾಚಾರಿ, ಷಣ್ಮುಖಾಚಾರಿ, ಅಶೋಕಾಚಾರಿ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link