ಕುಣಿಗಲ್ :
ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜಾಭಿವೃದ್ಧಿ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವಕರ್ಮ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಭೆಯಲ್ಲಿ ಪಾಲ್ಗೊಂಡ ಅತಿಥಿಗಳು ಮಾತನಾಡಿ ವಿಶ್ವಕರ್ಮರು ದೈವ ಸಂಬೂತರು ಪುರಾಣದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು ದೇವತೆಗಳಿಗೆ ಭವನ ನಿರ್ಮಾಣ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು ಹಾಗೂ ಐತಿಹಾಸಿಕವಾಗಿ ಆಚಾರ್ಯ ಎಂಬ ಹೆಸರು ಕಾಲಕ್ರಮೇಣ ಆಚಾರಿ ಎಂಬುದಾಗಿ ಬೆಳಕಿಗೆ ಬಂದಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮುಖಂಡರುಗಳನ್ನು ಸನ್ಮಾನಿಸಿದರು. ಪುರಸಭಾ ಅಧ್ಯಕ್ಷೆ ನಳಿನಾಬೈರಪ್ಪ ಉಪಾಧ್ಯಕ್ಷ ಅರುಣಕುಮಾರ್ ಉಪ ತಹಸೀಲ್ದಾರ್ ಸೋಮಶೇಖರ್, ವಿಶ್ವಕರ್ಮ ಜನಾಂಗದ ತಾಲ್ಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಕೋಟೆಕುಮಾರ್, ಕುಣಿಗಲ್‍ಶಿವಣ್ಣ ಹಾಗೂ ಪದಾಧಿಕಾರಿಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ|| ಮಂಜುನಾಥ್. ಸಿಡಿಪಿಒ ಅಧಿಕಾರಿ ರಜನಿ, ಬಿಸಿಎಂ ಹಾಸ್ಟಲ್‍ನ ಪಾರ್ವತವ್ವ, ಕಾರ್ಮಿಕ ಇಲಾಖಾಧಿಕಾರಿ ಅನುಪಮ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ