ಸಂವಿಧಾನದ ಪ್ರತಿ ಸುಟ್ಟವರ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರ ಆಗ್ರಹ

ಕುಣಿಗಲ್

            ನಮ್ಮ ದೇಶದ ಸಂವಿಧಾನ ಪ್ರತಿಗಳನ್ನ ಸುಟ್ಟು ಹಾಕಿ ಅವಮಾನಿಸಿದ ಮನುವಾದಿಗಳನ್ನ ಪ್ರಧಾನ ಮಂತ್ರಿಗಳು ಉಗ್ರ ಶಿಕ್ಷೆಗೆ ಒಳಪಡಿಸುವಂತೆ ದಲಿತ ಸಂಘಟನೆಯ ಮುಖಂಡರು ಒತ್ತಾಯಿಸಿ ಪ್ರತಿಭಟಿಸಿದ ಘಟನೆ ವರದಿಯಾಗಿದೆ.

           ತಾಲ್ಲೂಕು ಕಚೇರಿಯ ಮುಂದೆ ಜಿಲ್ಲಾಢಳಿತ ಸಂಘಟನಾ ಸಂಚಾಲಕ ವಿ.ಶಿವಶಂಕರ್ ಹಾಗೂ ಹಲವು ದಲಿತ ಮುಖಂಡರು ದಲಿತ ಸಂಘಟನೆಗಳ ಒಕ್ಕೂಟವೂ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಾ, ಇತ್ತೀಚೆಗೆ ದೆಹಲಿಯ ಜಂತರ್-ಮಂತರ್‍ನಲ್ಲಿ ಕೆಲವು ಮನುವಾದಿ ಕಿಡಿಗೇಡಿಗಳು ಈ ದೇಶದ ಪ್ರಜಾಪ್ರಭುತ್ವದ ಪವಿತ್ರ ಗ್ರಂಥವಾದ ಸಂವಿಧಾನ ಪ್ರತಿಗಳನ್ನ ಸುಟ್ಟು ಹಾಕಿ ಈ ದೇಶಕ್ಕೆ ಅಪಮಾನ ಮಾಡಿರುವ ವ್ಯಕ್ತಿಗಳನ್ನ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಉಗ್ರ ಶಿಕ್ಷೆಗೆ ಒಳಪಡಿಸಿ ಗಡಿಪಾರು ಮಾಡುವುದರ ಜೊತೆಗೆ, ಬಹುಸಂಖ್ಯಾತರಾದ ಪರಿಶಿಷ್ಟ ಜಾತಿ, ವರ್ಗಗಳ ಹಾಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಪವಿತ್ರ ಗ್ರಂಥವಾದ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಪ್ರತಿಯನ್ನ ಸುಟ್ಟುಹಾಕಿ ಈ ದೇಶÀದ ಮೂಲ ನಿವಾಸಿಗಳಿಗೆ ಅಪಮಾನ ಮಾಡಿರುವವರ ವಿರುದ್ಧ ಉಗ್ರ ಕಾನೂನು ಕ್ರಮಜರುಗಿಸುವ ಮೂಲಕ ಸಂವಿಧಾನ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಆಗ್ರಹಪಡಿಸುತ್ತಾ, ವಿಕೃತ ಮನಸ್ಸುಗಳು ದೇಶದಲ್ಲಿ ಇಂತಹ ಕೃತ್ಯಗಳನ್ನ ಪದೇ ಪದೇ ನಡೆಸುತ್ತಿರುವ ಬಗ್ಗೆ ದಲಿತರು ಜಾಗೃತಿಗೊಂಡು ಹೋರಾಟ ಮಾಡಬೇಕಾಗಿದೆ. ಸಂವಿಧಾನವೂ ಮಹಿಳೆಯರು, ಕಾರ್ಮಿಕರು ನೊಂದವರ ಪವಿತ್ರ ಗ್ರಂಥವಾಗಿದೆ ಎಂದು ತಿಳಿಸಿ, ದೇಶದ್ರೋಹಿಗಳನ್ನ ಕೂಡಲೇ ಬಂಧಿಸುವಂತೆ ಒತ್ತ್ತಾಯಪಡಿಸಿದರು.

             ಇದೇ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಕೆ.ಜಿ.ನಾಗಣ್ಣ ದಲಿತ ಮುಖಂಡರಾದ ಕೆ.ಎಸ್.ವೆಂಕಟಸುಬ್ಬಯ್ಯ, ವರದರಾಜು, ದಲಿತನಾರಾಯಣ, ರಾಮಚಂದ್ರಯ್ಯ, ಶ್ರೀನಿವಾಸ್, ರಾಮಲಿಂಗಯ್ಯ ಮಹಿಳಾ ಮುಖಂಡರಾದ ಮಂಜುಳ , ದಂಡೋರದ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಮಿಕ ಸಂಘದ ಕೃಷ್ಣರಾಜು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ನೀಡಿದರು.

Recent Articles

spot_img

Related Stories

Share via
Copy link