ಸಂವಿಧಾನದ ಪ್ರತಿ ಸುಟ್ಟುಹಾಕಿದ ಪ್ರಕರಣ

ಚಿತ್ರದುರ್ಗ

    ಭಾರತದ ಸಂವಿಧಾನದ ಪ್ರತಿಗಳನ್ನು ಹರಿದು ಅದನ್ನು ಸುಟ್ಟು ಹಾಕಿ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ವಿರುದ್ಧ ಹೇಳಿರುವ ಕಿಡಿಗೇಡಿಗಳ ವಿರುದ್ಧ ದೇಶದ್ರೋಹದಂತಹ ಕಾನೂನುಗಳನ್ನು ಅಳವಡಿಸಿ ಶಿಕ್ಷೆಗೊಳಪಡಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಯ ಕಛೇರಿಯ ಎದುರು ವಕೀಲರುಗಳು ಸೇರಿ ಪ್ರತಿಭಟನೆ ನಡೆಸಿದರು.
ಕಳೆದವಾರ ನವದೆಹಲಿ ಜಂತರ್ ಮಂತರ್‍ನಲ್ಲಿ ಅಜಾದ್‍ಸೇವೆ ಎಂಬ ಸಂಘಟನೆ ಹಾಗೂ ಇನ್ನಿತರ ಸಂಘಟನೆಯ ವ್ಯಕ್ತಿಗಳು ಸೇರಿ ನಮ್ಮ ದೇಶದ ಪವಿತ್ರ ಗ್ರಂಥವಾದ ಸಂವಿಧಾನದ ಪ್ರತಿಗಳನ್ನು ಹರಿದು ಹಾಕಿ ಸಂವಿಧಾನ್ ಹಠಾವೋ, ದೇಶ್ ಬಚಾವ್ ಎಂಬ ಘೋಷಣೆಗಳನ್ನು ಕೂಗಿ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿರುತ್ತಾರೆ. ಅದು ಅಲ್ಲದೇ ಡಾ|| ಬಿ.ಆರ್.ಅಂಬೇಡ್ಕರ್ ರವರನ್ನು ಸಹ ಸುಟು ಹಾಕಿ ಎಂದು ಅವರ ದಿಕ್ಕಾರವನ್ನು ಕೂಗಿ ಎಸ್.ಸಿ.ಎಸ್ಸಿ ಕಾಯ್ದೆಯನ್ನು ರೂಪಿಸಿರುವುದು ಸರಿಯಲ್ಲ ಎಂದು ದೇಶದ ವಿರುದ್ಧ ಘೋಷಣೆಗಳನ್ನು ಕೂಗಿರುತ್ತಾರೆ. ಈ ಕೃತ್ಯವನ್ನು ಪೀಪಲ್ಸ್ ಲಾಯರ್ಸ್ ಗಿಲ್ಡ್ ತೀವ್ರವಾಗಿ ಖಂಡಿಸಿರುತ್ತದೆ.

   ಪ್ರತಿಭಟನೆಯನ್ನು ಉದ್ದೇಶಿಸಿ ಪೀಪಲ್ಸ್ ಲಾಯರ್ಸ್ ಗಿಲ್ಡ್‍ನ ಅಧ್ಯಕ್ಷರಾದ ಅನಿಸ್ ಪಾಷರವರು ಮಾತನಾಡಿ ಸವಿಸ್ತಾರವಾಗಿ ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿರುತ್ತಾರೆ. ಹೀಗೆ ಆಜಾದ್ ಸೇನೆ ಹಾಗೂ ಇತರೆ ಸಂಘಟನೆಗಳು ಸೇರಿ ಭಾರತೀಯರಾದ ನಮ್ಮಗಳ ಬಾವನೆಗಳಿಗೆ ಧಕ್ಕೆ ತಂದಿದಲ್ಲದೆ ಈ ರೀತಿಯ ಕೃತ್ಯಗಳನ್ನು ಮಾಡಿ ದೇಶದ ವಿರುದ್ಧ ದಂಗೆ ಏಳುವಂತಹ ಪ್ರಚೋದನೆ ಮಾಡಿ ದೇಶ ದ್ರೋಹದ ಕೃತ್ಯ ಮಾಡಿರುತ್ತಾರೆ. ಅದು ಅಲ್ಲದೆ ದಲಿತರ ವಿರುದ್ಧ ಅವಹೇಳನಕಾರಿ ಮಾತನಾಡಿ ಜಾತಿ ನಿಂದನೆ ಮಾಡಿರುತಾರೆ. ಈ ರೀತಿ ಕೃತ್ಯ ಮಾಡಿದ್ದರಿಂಧ ದಲಿತ ಮತ್ತು ಇತರೆ ಜಾತಿಗಳ ಮಧ್ಯೆ ವೈಷಮ್ಯವನ್ನುಂಟು ಮಾಡು ಕೃತ್ಯವನ್ನು ಮಾಡಿರುತ್ತಾರೆ ಎಂದು ತಿಳಿಸಿದರು.

   ದಲಿತರನ್ನು ಕಂಡ ಕಂಡಲ್ಲಿ ವಿನಾಕಾರಣ ಕುಂಟು ನೆಪ ಇಟ್ಟುಕೊಂಡು ಕಂಡ ಕಂಡಲ್ಲಿ ಕೊಲೆಮಾಡುವುದು ಗೋರಕ್ಷಕರ ಸೋಗಿನಲ್ಲಿ ಮುಸ್ಲಿಂರನ್ನು ನಿರ್ದಾಕ್ಷಣ್ಯವಾಗಿ ಹಲ್ಲೆಮಾಡಿ ಹಿಂಸಿಸಿ ಜೀವ ತೆಗೆಯುತ್ತಿರುವ ಪ್ರವೃತ್ತಿ ದಿನೆ ದಿನೆ ಹೆಚ್ಚುತ್ತಿದೆ. ಕಾರಣ ಇಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕಠಿಣ ಕ್ರಮವನ್ನು ಕೈಗೊಳ್ಳದೆ ಇರುವುದು ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ದೇಶ ದ್ರೋಹಿ ಕೃತ್ಯವನ್ನು ಎಸಗಿದ ವ್ಯಕ್ತಿಗಳ ವಿರುದ್ಧ ಹೋಲಿಸಲು ಕಠಿಣ ಶಿಕ್ಷೆಗೆ ಒಳಪಡಿಸುವಂತಹ ಕಲಂಗಳನ್ನು ಅಳವಡಿಸಿ ತೀವ್ರಕ್ರಮ ಕೈಗೊಳ್ಳದೆ ಕೇವಲ ಸಣ್ಣ ಪ್ರಮಾಣದ ಶಿಕ್ಷೆಗೆ ಒಳಪಡಿಸುವ ಕಲಂಗಳನ್ನು ದಾಖಲೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲೂ ಕೂಡ ಈವರೆಗೆ ಕೇವಲ ಒಬ್ಬ ವ್ಯಕ್ತಿಯನ್ನು ಬಂಧಿಸಿರುತ್ತಾರೆ. ಹಾಗೂ ದೇಶದ್ರೋಹದಂತಹ ಕಲಂಗಳನ್ನು ಅಳವಡಿಸಿರುವುದಿಲ್ಲ ಎಂದು ದೂರಿದ್ದಾರೆ.

    ದೆಹಲಿಯಂತಹ ನಗರದ ಹೃದಯ ಭಾಗದಲ್ಲಿ ಇಷ್ಟು ತೀವ್ರತರವಾದಂತಹ ಘಟನೆ ನಡೆದರೂ ಕೂಡ ನಮ್ಮ ದೇಶದ ಪ್ರಧಾನಿಗಳಾಗಿ ಅಥವಾ ಇತರೆ ಪ್ರಜಾಪ್ರತಿನಿಧಿಗಳಾಗಲಿ ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರೆಯ ನೀಡುತ್ತಿಲ್ಲ ಇದನ್ನು ಗಮನಿಸಿದರೆ ನಮ್ಮ ದೇಶದ ಭವಿಷ್ಯ ಅಪಾಯದಲ್ಲಿರುವುದು ಕಾಣುತ್ತಿದೆ. ಈ ಕೃತ್ಯಕ್ಕೆ ತಕ್ಕ ಕ್ರಮ ತೆಗೆದುಕೊಳ್ಳದೆ ಇದ್ದರೆ ಅಂತಹ ದುಷ್ಕರ್ಮಿಗಳಿಗೆ ಇನ್ನೂ ಹೆಚ್ಚು ಪ್ರಚೋದನೆ ನೀಡಿದಂತಾಗುತ್ತದೆ ಹಾಗೂ ಇದರಿಂದ ನಮ್ಮ ದೇಶದ ಆಂತರಿಕ ಭದ್ರತೆಗೆ ದಕ್ಕೆಯಾಗುವುದಲ್ಲದೆ ನಮ್ಮ ದೇಶದ ಐಕ್ಯತೆ, ಭ್ರಾತೃತ್ವವನ್ನು ಒಳಗೊಳಗೆ ಪೊಳ್ಳು ಮಾಡುವ ಪ್ರಯತ್ನ ನಡೆಯುತ್ತಿದೆ. ದೇಶದ್ರೋಹದಂತಹ ಕಾನೂನು ಅಳವಡಿಸಿ ಅಂತಹ ವ್ಯಕ್ತಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರು, ಶಿವುಯಾದವ್, ಪ್ರತಾಪ್‍ಜೋಗಿ.ಓ, ಅಬ್ದುಲ್ ಸಮದ್, ಜಯ್ಯಣ್ಣ, ನಜೀಬ್‍ವುಲ್ಲಾ, ದೀಲಿಪ್, ಚಂದ್ರಣ್ಣ, ರಾಜಪ್ಪ, ತಕ್ಷಶಿಲ, ಚಂದ್ರಕ್ಕ, ಉಮಾಪತಿ, ನಾಗೇಶ್, ಡಿ.ತಿಪ್ಪೇಸ್ವಾಮಿ, ವಹಿದಾಬಾನು ಇನ್ನು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap