ಹಿರಿಯೂರು :
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ನಮಗೆ ಸಂವಿಧಾನವನ್ನು ನೀಡಿದ್ದು ನಮ್ಮ ಭವ್ಯ ಭಾರತದ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ಇಂದು ಪವಿತ್ರವಾದ ರಕ್ಷಾ ಬಂಧನದ ಪ್ರಯುಕ್ತ ನಮ್ಮ ಸಂವಿಧಾನ ಪುಸ್ತಕಕ್ಕೆ ರಾಖಿ ಕಟ್ಟುವ ಮೂಲಕ ವಿನೂತನವಾಗಿ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸುತ್ತಿದ್ದೇವೆ ಎಂದು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಜಿ.ದಾದಾಪೀರ್ ಹೇಳಿದರು.
ಇಲ್ಲಿನ ವೇದಾವತಿ ನಗರದಲ್ಲಿ ಯುವ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಅವರು ಅವರು ಮಾತನಾಡಿದರು. ತಾಲ್ಲೂಕು ಯುವ ಕಾಂಗ್ರೇಸ್ ಅಧ್ಯಕ್ಷರಾದ ರಫೀಕ್ ಉಲ್ಲಾ ಮಾತನಾಡಿ ಅಣ್ಣ ತಂಗಿಯರ ಪವಿತ್ರವಾದ ರಕ್ಷಾ ಬಂಧನದ ಬಗ್ಗೆ ತಿಳಿಸಿದರು ಹಾಗೂ ಎಲ್ಲರೂ ಸ್ನೇಹ ಸಹೋದರತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ತಾಲ್ಲೂಕು ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಎಸ್.ಸಿ.ಸೆಲ್ ಘಟಕದ ನಗರ ಬ್ಲಾಕ್‍ಕಾಂಗ್ರೇಸ್ ಉಪಾಧ್ಯಕ್ಷರಾದ ಜ್ಞಾನೇಶ್, ಎಸ್‍ಸಿಸೆಲ್ ಗ್ರಾಮಾಂತರ ಉಪಾಧ್ಯಕ್ಷರಾದ ಶಿವಕುಮಾರ್, ಎಸ್.ಟಿ.ಸೆಲ್ ನಗರ ಉಪಾಧ್ಯಕ್ಷರಾದ ಗಿರೀಶ್ ವಿಜಯ್, ತಿಪ್ಪೇಶ್, ಶ್ರೀನಿವಾಸ್, ಪ್ರತಾಪ್, ಆನಂದ್,ಅಜಂತ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








