ನವದೆಹಲಿ:
ಕಪ್ ನೂಡಲ್ಸ್‌ಗಳು, ಸಿದ್ಧಪಡಿಸಿದ ಆಹಾರ ಪದಾರ್ಥಗಳು ಮತ್ತು ಸಕ್ಕರೆ ಬೆರೆಸಿದ ಪಾನೀಯಗಳಂತಹ ಅತ್ಯಂತ ಸಂಸ್ಕರಿಸಿದ ಆಹಾರಗಳು, ವಿಶೇಷವಾಗಿ ಯುವಜನರು ಮತ್ತು ಕಡಿಮೆ ಆದಾಯದ ಕುಟುಂಬಗಳಲ್ಲಿ ಸಾಂಪ್ರದಾಯಿಕ ಆಹಾರಗಳ ಸ್ಥಾನವನ್ನು ಹೆಚ್ಚಾಗಿ ಕಬಳಿಸುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಲೋಕಸಭೆಯ ಚಳಿಗಾಲ ಅಧಿವೇಶನದ ಇಂದಿನ ಶೂನ್ಯವೇಳೆಯಲ್ಲಿ, ಭಾರತದಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ ಆರೋಗ್ಯದ ಅಪಾಯಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.
ಈ ಉತ್ಪನ್ನಗಳ ಹೆಚ್ಚಿನ ಸೇವನೆಯು ಸ್ಥೂಲಕಾಯತೆ , ಹೃದಯರಕ್ತನಾಳದ ಕಾಯಿಲೆಗಳು , ಟೈಪ್ 2 ಮಧುಮೇಹ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದು ಲೋಕಸಭೆಯಲ್ಲಿ ವಿವರಿಸಿದ್ದಾರೆ.








