ಸಚಿವರಿಂದ ಪ್ರಗತಿ ಪರಿಶೀಲನೆ

ಮಂಗಳೂರು:

                    ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ನಿರ್ಮಾಣಗೊಂಡ ರಸ್ತೆಗಳಲ್ಲಿ ನಿರ್ವಹಣೆ ಇರುವ ರಸ್ತೆಗಳನ್ನು ಪ್ರತ್ಯೇಕಪಡಿಸಿ ಉಳಿದ ರಸ್ತೆಗಳಿಗೆ ಮಾತ್ರ ಪ್ರಾಕೃತಿಕ ವಿಕೋಪದಡಿ ಅನುದಾನದ ನೆರವು ಪಡೆದು ರಸ್ತೆ ಸರಿಪಡಿಸಿ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಿಸಿದ ರಸ್ತೆಗಳಿಗೆ ನಿರ್ವಹಣೆ ಹೊಣೆ ವಹಿಸಿರುವ ಏಜೆನ್ಸಿಗಳ ಹೊಣೆಯನ್ನು ಸಂಬಂಧಪಟ್ಟವರಿಗೆ ಜ್ಞಾಪಿಸಿ ರಸ್ತೆ ಸರಿಪಡಿಸಿ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಮತ್ತು ಕಾನೂನು ಮತ್ತು ಸಂಸದೀಯ ಸಚಿವರಾದ ಕೃಷ್ಣ ಭೈರೇಗೌಡರು ಹೇಳಿದರು.

                   ಅವರಿಂದು ಜಿಲ್ಲಾಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಡಿ ಬರುವ ರಸ್ತೆಗಳನ್ನು ಮೊದಲು ಗುರುತಿಸಿ ನಿರ್ವಹಣೆ ಇರುವ ರಸ್ತೆಗಳನ್ನು ಪ್ರತ್ಯೇಕಪಡಿಸಿ ಈ ಮಾಹಿತಿಯನ್ನು ಶಾಸಕರಿಗೆ ಮತ್ತು ಸಿಇಒ ಅವರಿಗೆ ನೀಡಿ ಎಂದ ಸಚಿವರು, ಇದರಿಂದ ರಸ್ತೆ ನಿರ್ವಹಣೆ ಸುಲಭ ಸಾಧ್ಯ ಎಂದರು. ಮಳೆಯಿಂದಾಗಿ ಪಾಳು ಬಿದ್ದ ಉಳಿದ ರಸ್ತೆಗಳಿಗೆ ಕ್ರಿಯಾ ಯೋಜನೆ ರೂಪಿಸಿ ಸಿಇಒ ಮೂಲಕ ಜಿಲ್ಲಾಧಿಕಾರಿಗಳಿಗೆ ನೀಡಿದರೆ ವಿಕೋಪ ನಿಧಿಯಡಿ ಪರಿಹಾರ ನೀಡುವರು ಎಂದರು.

                  ಜಿಲ್ಲೆಯಲ್ಲಿ ನರೇಗ ಯೋಜನೆಯಡಿ ರಚಿಸಲ್ಪಟ್ಟ ಕಿಂಡಿಅಣೆಕಟ್ಟು ಮತ್ತು ನೀರು ಸಂಗ್ರಹ ಯೋಜನೆಗಳು ಜಿಲ್ಲೆಗೆ ಪೂರಕವಾಗಿದ್ದು ಇದನ್ನು ಇನ್ನಷ್ಟು ವ್ಯಾಪಕವಾಗಿ ರಚಿಸಿ ಎಂದು ಸಲಹೆ ಮಾಡಿದ ಸಚಿವರು, ನರೇಗಾದಡಿ ಹಲವು ಕೋಟಿ ರೂ.ಗಳ ಕಾಮಗಾರಿ ಅನುಷ್ಟಾನ ಸಾಧ್ಯವಾಗಿದ್ದು, ಶಾಲೆಗಳ ಆವರಣಗೋಡೆ, ತೋಟಗಾರಿಕೆ ವಲಯ ಹೆಚ್ಚಳ ಸೇರಿದಂತೆ ರಚನಾತ್ಮಕವಾಗಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು, ಎಲ್ಲದಕ್ಕೂ ಸರ್ಕಾರವನ್ನು ನೋಡದೆ ಲಭ್ಯ ಇರುವ ನರೇಗಾ ಯೋಜನಯಡಿಯಲ್ಲಿಯೇ ಕೈಗೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು

Recent Articles

spot_img

Related Stories

Share via
Copy link