ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಸ ಸೇತುವೆಯಲ್ಲಿ ಬಿರುಕು

ಕೊಪ್ಪಳ:

         ಸತತವಾಗಿ ಸುರಿಯಯುತ್ತಿರುವ ಮಳೆಯಿಂದಾಗಿ  ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಸುರಕ್ಷತಾ ಧೃಷ್ಠಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ ಇದರಿಂದ  ಕೊಪ್ಪಳದಲ್ಲಿ ಸುಗಮ ಸಂಚಾರಕ್ಕೆಂದು ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹೊಸ ಸೇತುವೆ ಬಿರುಕು ಬಿಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿದೆ.z

        ಕಡೇಬಾಗಿಲು-ಬುಕ್ಕಸಾಗರ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಬಿರುಕು ಕಂಡಿದೆ. ಒಂದು ವರ್ಷದ ಹಿಂದೆ ಸೆಪ್ಟಂಬರ್ 22ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು.  32 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಸುಮಾರು  ಅರ್ಧ ಕಿ.ಮೀ. ಉದ್ದ ಇದೆ , ಸ್ವಲ್ಪ ದಿನ ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

        ಇದಕ್ಕೆ ಪುಷ್ಠಿ ನೀಡುವಂತೆ ತುಂಗಭದ್ರಾ ಜಲಾಶಯದಿಂದ ದಿನಕ್ಕೆ 2 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ಒಂದು ವಾರದಿಂದ ಗಂಗಾವತಿ ಕಂಪ್ಲಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆ ಆಗಿದೆ.

        ಕಂಪ್ಲಿ ಸೇತುವೆ ಮುಳುಗಿದ ಹಿನ್ನಲೆ ಗಂಗಾವತಿಯಿಂದ ಹೊಸಪೇಟೆ ಮತ್ತು ಬಳ್ಳಾರಿ ಗೆ ಹೋಗುವವರು ಕೊಪ್ಪಳದ ಸೇತುವೆಯನ್ನೆ ಅವಲಂಭಿಸುವ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚಾರಿಸುತ್ತಿವೆ. ಸ್ವಲ್ಪ ತೊಂದರೆ ಆದರೂ ಭಾರಿ  ಅನಾಹುತ ಸಂಭವಿಸುವುದು ಅನುಮಾನವೇ ಇಲ್ಲ. ಇನ್ನೂ ಸೇತುವೆಯಲ್ಲಿ ಮೂಡಿರುವ  ಬಿರುಕಿಗೆ ಕಳಪೆ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page like ಮಾಡಿ