ಮಂಗಳೂರು
ನೆರೆಯ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ವಿನಾಶವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಬಿಂಬಿಸತೊಡಗಿದೆ. ಅಲ್ಲಿ ಸಂಭವಿಸುತ್ತಿರುವ ಹಾನಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗೋಚರಿಸತೊಡಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿದೆ ಮತ್ತು ಅದರಿಂದ ಜನ ಜೀವನದಲ್ಲಿ ತುಂಬಾ ಏರುಪೇರುಗಳು ಸಂಭವಿಸಲಾರಂಭಿಸಿವೆ.
ಈ ಪ್ರದೇಶದಲ್ಲಿ ಹರಿಯುವ ಕುಮಾರಧಾರ, ಪಯಶ್ವಿನಿ ಸೇರಿದಂತೆ ಇನ್ನಿತರ ಸಣ್ಣ ಹೊಳೆಗಳು ಉಕ್ಕಿ ಹರಿಯುತ್ತಿವೆ. ಸಮಯ ಕಳೆಯುತ್ತಿದ್ದಂತೆ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಜನವಸತಿ ಪ್ರದೇಶಗಳಿಗೂ ನೀರು ನುಗ್ಗುತ್ತಿದೆ. ಸುಳ್ಯ, ಬೆಳ್ತಂಗಡಿ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ.
ಮಂಗಳೂರಿಗೆ ಬೇರೆಡೆಯಿಂದ ಇದ್ದಂತಹ ಸಾರಿಗೆ ವ್ಯವಸ್ಥೆ ಸಹ ಕಡಿತಗಳ್ಳಲಾರಂಬಿಸಿವೆ ಇದರಿಂದ ದ.ಕ ಅಕ್ಷರಸಹ ದ್ವಿಪವಾಗಿ ಗೋಚರಿಸತೋಡಗಿದೆ.
