ಸದ್ಭಾವನೆಗಳು ಮೂಡಿದಲ್ಲಿ ಮಾತ್ರ ಸಮಾಜದ ಎಲ್ಲಾ ವರ್ಗದಲ್ಲೂ ಸಾಮರಸ್ಯ

ಚಳ್ಳಕೆರೆ

   ಸಮಾಜದಲ್ಲಿ ಎಲ್ಲಾ ಸಮುದಾಯದಲ್ಲೂ ಸಮಾನತೆ ಮೂಡಿದರೆ ಯಾವುದೇ ರೀತಿಯ ಅನಗತ್ಯ ದ್ವೇಷ ಭಾವನೆಗಳಿಗೆ ಅವಕಾಶವಿರುವುದಿಲ್ಲ. ಮುಕ್ತಮನಸ್ಸಿನಿಂದ ನಾವೆಲ್ಲರೂ ಸಮಾಜದ ಹಿತಕ್ಕಾಗಿ ದುಡಿಯೋಣವೆಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ನಮ್ಮೆಲ್ಲರ ಉತ್ತಮ ಬದುಕಿನ ನೆಮ್ಮದಿಗೆ ನಮ್ಮಲ್ಲಿನ ಸದ್ಭಾವನೆಗಳೇ ಮೂಲ ಕಾರಣ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಜಾತಿಭೇದ, ಮತಪಂಥಗಳನ್ನು ಮರೆತು ಸಮಾಜದಲ್ಲಿ ಸದ್ಭಾವನೆಗಳು ನೆಲೆಯೂರಲು ಪ್ರಾಮಾಣಿಕ ಪ್ರಯತ್ನ ನಡೆಸೋಣವೆಂದು ಬಾಪೂಜಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಜಿ.ವಿ.ರಾಜಣ್ಣ ತಿಳಿಸಿದರು.

   ಅವರು, ಸೋಮವಾರ ಕಾಲೇಜಿನ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಆಚರಿಸಿದ್ದ ಸದ್ಭಾವನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಹಲವಾರು ದಶಕಗಳಿಂದ ಸಮಾಜದಲ್ಲಿ ಅಡಗಿರುವ ಜಾತೀಯತೆ, ಮತಿಯತೆಯ ಭಾವನೆಯನ್ನು ತೊಡೆದು ಹಾಕಲು ಎಲ್ಲರೂ ಪ್ರಯತ್ನಿಸಬೇಕಿದೆ. ವಿಶೇಷವಾಗಿ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಕರ್ಷಿತರಾಗುತ್ತಾರೆ. ಗ್ರಾಮೀಣ ಭಾಗಗಳಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ನಿಯಂತ್ರಿಸುವಲ್ಲಿ ಇವು ಸಹಕಾರಿಯಾಗಯತ್ತವೆ. ಅದ್ದರಿಂದ ಯುವ ಸಮೂಹ ಸದ್ಭಾವನಾ ಜಾಗೃತಿ ಕಾರ್ಯಕ್ರಮದ ಆಧಾರಸ್ತಂಭಗಳಾಗಬೇಕು ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಓ.ಬಾಬುಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಮಧುರ ಬಾಂದವ್ಯ ಮೂಡಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಸಮಾಜಕ್ಕೆ ಕಂಠಕ ಪ್ರಾಯವಾಗಿರುವ ಉಗ್ರಗಾಮಿ ಚಟುವಟಿಕೆ, ಭಯೋತ್ಪಾದಕರ ಎಲ್ಲೆಮೀರಿದ ವರ್ತನೆಯನ್ನು ನಿಯಂತ್ರಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸದ್ಭಾವನೆ ಎಂದರೆ ಉತ್ತಮ ಬದುಕನ್ನು ಆಯ್ದುಕೊಳ್ಳುವಲ್ಲಿ ಯುವ ಜನಾಂಗ ಮುಂದಾಗಬೇಕು. ಯುವಕರಲ್ಲಿ ಮೂಡುವ ಸದ್ಭಾವನೆಗಳು ಎಂದಿಗೂ ಶಾಶ್ವತವಾಗಿರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಉಮೇಶ್, ನಂದಿನಿ, ಜೆ.ತಿಪ್ಪೇಸ್ವಾಮಿ, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link