ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾದ ಅಮೇರಿಕಾ

ಚಿಕಾಗೊ:

            ಅಮೆರಿಕಾವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸುವುದರಿಂದ ಅದು ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ಅದು ನೀಡುತ್ತಿದ್ದ ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾಗಿದೆ.ಉತ್ತರ ಡಕೊಟಾದ ಫರ್ಗೊ ನಗರದಲ್ಲಿ ಹಣ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೀನಾ ದೇಶವು ಅತಿ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ವಿಶ್ವ ವ್ಯಾಪಾರ ಸಂಘಟನೆ ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ.ಕೆಲವು ದೇಶಗಳನ್ನು ನಾವು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ರಾಷ್ಟ್ರವೆಂದು ಪರಿಗಣಿಸುತ್ತೇವೆ. ಇನ್ನೂ ಪ್ರವರ್ಧಮಾನಕ್ಕೆ ಬಾರದಿರುವ ಕೆಲವು ದೇಶಗಳಿಗೆ ನಾವು ಸಬ್ಸಿಡಿಗಳನ್ನು ನೀಡುತ್ತೇವೆ. ಇಲ್ಲಿ ಇಡೀ ವಿಷಯ ತುಂಬಾ ಆಸಕ್ತಿಕರವಾಗಿದೆ. ಭಾರತ, ಚೀನಾ ಮೊದಲಾದ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

           ನಾವು ಅಭಿವೃದ್ಧಿ ಹೊಂದಿದ ದೇಶಗಳು ಎಂದು ಈ ದೇಶಗಳು ಹೇಳಿಕೊಳ್ಳುತ್ತಿದ್ದು ಇನ್ನೊಂದು ಕಡೆ ಸಬ್ಸಿಡಿಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ನಾವು ಹಣ ನೀಡಬೇಕು. ಈ ಇಡೀ ವಿಷಯಗಳನ್ನು ನೋಡಿದರೆ ತುಂಬಾ ಆಸಕ್ತಿಕರವಾಗಿದೆ. ಮುಂದಿನ ದಿನಗಳಲ್ಲಿ ನಾವು ಸಬ್ಸಿಡಿಗಳನ್ನು ನಿಲ್ಲಿಸುತ್ತೇವೆ. ನಾವು ನಿಲ್ಲಿಸಿದ್ದೇವೆ, ನಾವು ಕೂಡ ಅಭಿವೃದ್ಧಿ ಹೊಂದಿದ ದೇಶದವರಾಗಿದ್ದೇವೆ, ನನಗೆ ತಿಳಿದಿರುವ ಮಟ್ಟಿಗೆ ನಾವು ಅಭಿವೃದ್ಧಿ ಪಡೆದ ದೇಶದವರು. ಹಿಂದೆಂದಿಗಿಂತಲೂ ಹೆಚ್ಚು ನಾವು ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಟ್ರಂಪ್ ಹೇಳಿದಾಗ ಪ್ರೇಕ್ಷಕರಿಂದ ಕರತಾಡನ ಕೇಳಿಬಂತು.ವಿಶ್ವ ವ್ಯಾಪಾರ ಸಂಘಟನೆ ಮೇಲೆ ವಾಗ್ದಾಳಿ ನಡೆಸಿದ ಅವರು, ವಿಶ್ವ ವ್ಯಾಪಾರ ಸಂಘಟನೆ ಎಲ್ಲದಕ್ಕಿಂತಲೂ ಕೆಟ್ಟದು. ಅನೇಕರಿಗೆ ಅದೇನೆಂದು ಗೊತ್ತಿಲ್ಲ. ಅದು ಚೀನಾವನ್ನು ಪ್ರಬಲ ರಾಷ್ಟ್ರ ಮಾಡಲು ಬಿಟ್ಟಿದೆ ಎಂದು ಆರೋಪಿಸಿದರು.ಅಮೆರಿಕಾ ಮತ್ತು ಚೀನಾ ಮಧ್ಯೆ ವ್ಯಾಪಾರ ಕೊರತೆಯಿಂದಾಗಿ ವಿಶ್ವದ ಎರಡು ಪ್ರಬಲ ಆರ್ಥಿಕ ರಾಷ್ಟ್ರಗಳ ನಡುವೆ ದರ ಯುದ್ಧ ನಡೆದಿದೆ ಎಂದರು. ನಾನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅತಿದೊಡ್ಡ ಅಭಿಮಾನಿ, ಆದರೆ ವ್ಯವಹಾರ ವಿಷಯದಲ್ಲಿ ಸರಿಯಾಗಿರಬೇಕೆಂದು ನಾನು ಅವರಿಗೆ ಹೇಳಿದ್ದೇನೆ ಎಂದರು.

Recent Articles

spot_img

Related Stories

Share via
Copy link