ಬೆಂಗಳೂರು:
ಜೆಡಿಎಸ್ ಒಂದು ಗುಂಪು, ಕಾಂಗ್ರೆಸ್ ಒಂದು ಗುಂಪು ಮಾಡಿಕೊಂಡಿದೆ, ಸಮ್ಮಿಶ್ರ ಸರ್ಕಾರದ ಮೇಲೆ ಜನರಿಗೆ ರಾಗಿಕಾಳಿನಷ್ಟು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂದು ಬಿಜೆಪಿ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಬಿಜೆಪಿ ವಿಶೇಷ ಸಭೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ನಂಬಿಕೆ, ವಿಶ್ವಾಸವನ್ನು ಕಳೆದುಕೊಂಡರೆ ಸರ್ಕಾರವು, ಉತ್ತಮ ಸರ್ಕಾರವಾಗಿ ಉಳಿಯಲು ಸಾಧ್ಯವಿಲ್ಲ, ಪಾರದರ್ಶಕದ ರಾಜಕಾರಣವಾಗಿರದೆ ಸೇಡಿನ ರಾಜಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲವರು ಗುಂಪು ಕಟ್ಟಿಕೊಂಡು ದೆಹಲಿಗೆ ಓಡಿ ಹೋಗಿದ್ದಾರೆ ಹೀಗಾಗಿ ನಾವು ಸರ್ಕಾರ ಬೀಳಿಸುವ ಅಗತ್ಯವಿಲ್ಲ ಅವರೇ ಕಚ್ಚಾಡಿಕೊಂಡು ಸರ್ಕಾರ ಕೆಡವಿದರೆ ಮಾತ್ರ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ