ಬೆಂಗಳೂರು:
ಸರ್ಕಾರದ ವಿರುದ್ಧ ವಿಕಲಚೇತನರು 18-0-2024 ರಂದು ಸೋಮವಾರ ಬೆಳಿಗ್ಗೆ 11.00 ಗಂಟೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.ಕರ್ನಾಟಕ ರಾಜ್ಯದ ವಿಕಲಚೇತನರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಸರ್ಕಾರಿ ಮನವಿ ಮಾಡುತ್ತಿದ್ದಾರೆ …
ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಗಿದೆ. ಅದೇ ರೀತಿಯಾಗಿ ಸೌಲಭ್ಯ ಪುರುಷ ವಿಕಲಚೇತನರಿಗೂ ನೀಡಬೇಕು.ಕಾರಣ 2003 ರ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಎಲ್ಲಾ ವಿಕಲಚೇತನರಿಗೂ ಉಚಿತ ಪ್ರಯಾಣ ಕಲ್ಪಿಸಿದ್ದು ನಂತರದಲ್ಲಿ ಸ್ಥಗಿತವಾಗಿರುತ್ತದೆ. ಈಗಿನ ಸರ್ಕಾರದಲ್ಲಿ ಮಹಿಳಾ ವಿಕಲಚೇತನರಿಗೂ ಉಚಿತ ಪ್ರಯಾಣದ ಅವಕಾಶವಿದೆ.
ರಾಜ್ಯದಲ್ಲಿ 9,49,700 ವಿಕಲಚೇತನರು ಮಾಸಾಶನ ಪಡೆಯುತ್ತಿದ್ದಾರೆ. ಈ ಅನುಕೂಲ ಕರ್ನಾಟಕ ರಾಜ್ಯಾದ್ಯಾಂತ ವಿಕಲಚೇತನರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿತ್ತು. ಕಾಂಗ್ರೆಸ್ ಸರ್ಕಾರ ಈಗ ಸ್ಥಗಿತ ಮಾಡಿ 100 ಕೀ.ಮೀ. ವ್ಯಾಪ್ತಿಗೆ ಆದೇಶ ಮಾಡಿರುತ್ತಾರೆ.ಈ ಆದೇಶವನ್ನು ರದ್ದು ಮಾಡಿ ಪುನ: ಕರ್ನಾಟಕ ರಾಜ್ಯಾದ್ಯಾಂತ ಉಚಿತ ಪ್ರಯಾಣ ಮಾಡಲು ಇದಕ್ಕೆ ಅವಕಾಶ ನೀಡಲು… ಈ ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತೇವೆ. ಆದರೆ ನಮ್ಮ ಬೇಡಿಕೆ ಇದುವರೆಗೂ ಈಡೇರಿರುವುದಿಲ್ಲ.
ಆದ್ದರಿಂದ ಫ್ರಿಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಬೆಂಗಳೂರು ಉತ್ತರ ಮಾಜಿ ಎಂಪಿ ಅಭ್ಯರ್ಥಿ ಪರಸಪ್ಪ ಗಜ್ಜರಿ ಎಚ್ಚರಿಕೆ ಸರ್ಕಾರಕ್ಕೆ ನೀಡಿದ್ದಾರೆ.
