ಚಿತ್ರದುರ್ಗ
ವಿಷ್ಣುವರ್ಧನರವರ ಜನ್ಮದಿವನ್ನು ಸರ್ಕಾರವೇ ಆಚರಣೆ ಮಾಡಬೇಕು, ಅವರ ಸ್ಮಾರಕ ನಿರ್ಮಾಣದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡುವಂತೆ ಸರ್ಕಾರಕ್ಕೆ ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿ.ಕೆ.ಗೌಸ್ ಪೀರ್ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ತರುವನೂರು ರಸ್ತೆಯಲ್ಲಿನ ಪಾರ್ಕನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಷ್ಣುವರ್ಧನರವರ 68ನೇ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಷ್ಣುವರ್ಧನರವರು ಕಲಾವಿದ ಮಾತ್ರವಲ್ಲದೆ ಕಲಾಪೋಷಕರಾಗಿದ್ದರು ಚಿತ್ರರಂಗದಲ್ಲಿ ಬೆಳಕಿಗೆ ಬರುತ್ತಿದ್ದ ಹಲವಾರು ಕಿರು ಕಲಾವಿದರಿಗೆ ನೆರವು ನೀಡುವುದರ ಮೂಲಕ ಅವರು ಚಿತ್ರರಂಗದಲ್ಲಿ ಬೆಳೆಯುವಂತೆ ಮಾಡಿದರು. ಇವರ ಹುಟ್ಟುಹಬ್ಬವನ್ನು ನಮ್ಮ ಸಂಘದಿಂದ ಹಲವಾರು ವರ್ಷದಿಂದ ಆಚರಣೆ ಮಾಡಿಕೊಂಡು ಬರಲಾಗಿದೆ ಇನ್ನೂ ಮುಂದೆ ಜನ್ಮದಿನಾಚರಣೆ ಬದಲು ವಿಷ್ಣು ಜಯಂತಿಯ ಹೆಸರಿನಲ್ಲಿ ಆಚರಣೆ ಮಾಡಲಾಗವುದು ಎಂದರು.
ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ವಿಷ್ಣುವರ್ಧನರವರ ಜನ್ಮದಿನಾಚರಣೆಯನ್ನು ಅವರ ಅಭೀಮಾನಿಗಳು ಆಚರಣೆ ಮಾಡುವುದು ಒಂದು ಕಡೆಯಾದರೆ ಸರ್ಕಾರ ಅವರ ಕಲಾ ಸೇವೆಯನ್ನು ಗಮನಿಸಿ ಅವರ ಜನ್ಮದಿನಾಚರಣೆಯನ್ನು ಮುಂದಿನ ವರ್ಷದಿಂದ ಸರ್ಕಾರವೇ ಆಚರಣೆ ಮಾಡುವಂತೆ ಆಗ್ರಹಿಸಿದ ಗೌಸ್‍ಪೀರ್, ವಿಷ್ಣುವರ್ಧನ ರವರ ಸ್ಮಾರಕ ನಿರ್ಮಾಣ ಕಾರ್ಯ ನೆನೆಗುದ್ದಿಗೆ ಬಿದಿದ್ದೆ ಇದರ ಬಗ್ಗೆ ಸರ್ಕಾರ ಮಧ್ಯೆ ಪ್ರವೇಶ ಮಾಡುವುದರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ಶೀಘ್ರವಾಗಿ ಸ್ಮಾಕರದ ನಿರ್ಮಾಣ ಕಾಮಗಾರಿ ಪ್ರಾರಂಭವಾಗುವಂತೆ ಮಾಡುವಂತೆ ಒತ್ತಾಯಿಸಿದರು.
ವಾರ್ಡ ನಂ 29ರಲ್ಲಿನ ಈ ಉದ್ಯಾನವನ್ನು ಯಾರು ಸಹಾ ಕಾಳಜಿವಹಿಸದ ಸಮಯದಲ್ಲಿ ನಮ್ಮ ವಿಷ್ಣುವರ್ಧನರವರು ಸಂಘಟನೆಯಲ್ಲಿ ಸ್ವಚ್ಚ ಮಾಡುವುದರ ಮೂಲಕ ಸಸಿಗಳನ್ನು ನೆಟ್ಟು ಬೆಳಸಲಾಗಿದೆ ಇಲ್ಲಿ ಕೊಳವೆಬಾವಿ ಇದ್ದರು ಸಹಾ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇಲ್ಲ ಸಂಜೆಯಾಗುತ್ತಿದ್ದಂತೆಯೇ ಬೇರೆ ರೀತಿಯ ಚಟುವಟಿಕೆಗಳು ನಡೆಯುತ್ತಿದೆ ಇದರಿಂದ ಇಲ್ಲಿ ಉತ್ತಮವಾದ ಪಾರ್ಕ ನಿರ್ಮಾಣ ಮಾಡಿ ಅದರ ಉಸ್ತುವಾರಿಯನ್ನು ಬೇರೆಯವರಿಗೆ ನೀಡಿದರೆ ಅಗ ಜನತೆ ಬಂದು ಹೋಗುವುದು ಮಾಡುತ್ತಾರೆ ಇದರ ಬಗ್ಗೆ ನಗರಾಭೀವೃದ್ದಿ ಪ್ರಾಧಿಕಾರ ಗಮನ ನೀಡುವಂತೆ ಗೌಸ್‍ಪೀರ್ ಮನವಿ ಮಾಡಿದರು.
ನಗರದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ವಿಷ್ಣುವರ್ಧನ ರವರು ಜನ್ಮದಿನಾಚರಣೆ ಅಂಗವಾಗಿ ಕೇಕ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪಂಪ್ ಸರ್ಜಿಕಲ್ ಸೆಂಟರ್ ನಲ್ಲಿ ಉಚಿತವಾಗಿ ಹೃದಯ ತಪಾಸಣೆ ಶಿಬಿರವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಂಪ್ ಸರ್ಜಿಕಲ್ ಸೆಂಟರ್‍ನ ಡಾ.ಮಲ್ಲಿಕಾರ್ಜನ್, ಸೋಮು ನಗರಸಭೆ ಮಾಜಿ ಸದಸ್ಯ ಈರುಳ್ಲಿ ರಘು ಸೇರಿದಂತೆ ಇತರರು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
