ಚಳ್ಳಕೆರೆ 
ವಿಶ್ವದ ಬಹುತೇಕ ರಾಷ್ಟ್ರಗಳು ವಿಶೇಷವಾಗಿ ಮೆಚ್ಚುವ ಗೌರವಿಸುವ ವ್ಯಕ್ತಿ ಎಂದರೆ ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರಮೋದಿ. ರಾಷ್ಟ್ರದ ಇತಿಹಾಸದಲ್ಲಿ ಅಟಲ್ ಬಿಹಾರಿ ವಾಜಪೇಯಿರವರಷ್ಟೇ ಜನಪ್ರಿಯತೆಯನ್ನು ಹೊಂದುವಲ್ಲಿ ಮೋದಿ ಯಶಸ್ಸಿಯಾಗಿದ್ದಾರೆ.
ಅವರ ಕ್ರಿಯಾಶೀಲತೆ ನನ್ನನ್ನು ಹೆಚ್ಚು ಆಕರ್ಷಿಸಿದ್ದು, ಮತ್ತೊಮ್ಮೆ ಅವರನ್ನು ಈ ರಾಷ್ಟ್ರದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರಿ ಸೇವೆಯನ್ನು ತೊರೆದು ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ್ದು, ಜನಸೇವೆಯೇ ನಮ್ಮ ಉದ್ದೇಶವೆಂದು ದಾವಣಗೆರೆ ಮಹಾನಗರ ಪಾಲಿಕೆ ನಿವೃತ್ತ ಸಿಇಒ ಎಂ.ಎಸ್.ಜಯರಾಮ್ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣನವರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಸುಮಾರು 30 ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ.
ಯೋಜನೆಗಳ ಅನುಷ್ಠಾನದ ಬಗ್ಗೆಯೂ ಸಹ ಸಾಕಷ್ಟು ತಿಳಿದಿದ್ದೇನೆ. ಸಮಾಜದ ಬಡ ಜನತೆಗೆ ಸರ್ಕಾರದ ಸೌಲಭ್ಯಗಳು ಯಾವುದೇ ವಿಳಂಬವಿಲ್ಲದೆ ತಲುಪಬೇಕೆಂಬುವುದು ನಮ್ಮ ಉದ್ದೇಶ ರಾಜಕೀಯ ಕ್ಷೇತ್ರದಲ್ಲಿ ಸೇರ್ಪಡೆಯಾಗಿ ಇನ್ನೂ ಹೆಚ್ಚಿನ ಪ್ರಾಮಾಣಿಕ ಸೇವೆಯ ಮೂಲಕ ಬಿಜೆಪಿಯನ್ನು ಈ ಕ್ಷೇತ್ರದಲ್ಲಿ ಬಲಪಡಿಸಲು ಪಕ್ಷ ಸೇರ್ಪಡೆಯಾಗಿದ್ದೇನೆ. ಯಾವುದೇ ಸ್ಥಾನಮಾನಗಳನ್ನು ಹೊಂದುವ ಉದ್ದೇಶ ನನಗೆ ಇಲ್ಲ.
ನನಗೆ ಕೇವಲ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಕ್ರಿಯಾಶೀಲ ಕಾರ್ಯವೇ ನನ್ನನ್ನು ರಾಜಕೀಯ ಕ್ಷೇತ್ರ ಪ್ರವೇಶಿಸಲು ಸ್ಪೂರ್ತಿ ನೀಡಿತು. ಅದ್ದರಿಂದ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರ್ಪಡೆಯಾಗಿದ್ದೇನೆ. ನಾನು ಚಳ್ಳಕೆರೆಯಲ್ಲೇ ಹುಟ್ಟಿ ಬೆಳೆದಿದ್ದು, ಈ ಭಾಗದ ಎಲ್ಲಾ ಸಮುದಾಯದ ವಿಶ್ವಾಸವನ್ನು ಪಡೆದಿದ್ದೇನೆಂದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ದಕ್ಷ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಎಂ.ಎಸ್.ಜಯರಾಮ್ ಜನಪ್ರಿಯರಾಗಿದ್ಧಾರೆ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ಉನ್ನತ್ತ ಹುದ್ದೆಯ ಮೂಲಕ ಸೇವೆ ಸಲ್ಲಿಸಿದ್ದಾರೆ. ಅವರೇ ಸ್ವಯಂ ಪ್ರೇರಿತವಾಗಿ ಪಕ್ಷದ ಸದಸ್ಯತ್ವವನ್ನು ಬಯಸಿದ್ದು, ಕಳೆದ ಹಲವಾರು ವರ್ಷಗಳಿಂದ ಇವರ ಕುಟುಂಬದ ಒಡನಾಟವಿದ್ದು ಪಕ್ಷದ ಮುಖಂಡರ ಮಾರ್ಗದರ್ಶನ ಪಡೆದು ಅವರನ್ನು ಪಕ್ಷಕ್ಕೆ ಸದಸ್ಯತ್ವ ನೀಡುವ ಮೂಲಕ ಸ್ವಾಗತಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಡಿ.ಮಾನಪ್ಪ ವಜ್ಜಲ್, ನಗಸರಭಾ ಸದಸ್ಯ ಎಸ್.ಜಯಣ್ಣ, ಮಾಜಿ ಪುರಸಭಾ ಸದಸ್ಯರಾದ ಎಂ.ಎಸ್.ಶ್ರೀನಾಥ, ಟಿ.ಬೋರನಾಯಕ, ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುಭದ್ರಮ್ಮ, ಎ.ರಂಗಸ್ವಾಮಿ, ವೀರೇಶ್, ಕರೀಕೆರೆ ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಜಿ.ಕೆ.ವೀರಣ್ಣ, ರಂಗಸ್ವಾಮಿ, ಈಶ್ವರನಾಯಕ, ಆರ್.ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







