ಮೈಸೂರು:

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಸುಭದ್ರವಾಗಿದೆ, ಈ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡುತ್ತಿದ್ದ ಅವರು, ಗೌರಿ-ಗಣೇಶ ಹಬ್ಬದ ನಂತರ ಸರ್ಕಾರ ಪತನವಾಗುತ್ತದೆ ಎಂದು ಸುಮ್ಮನೆ ಯಾರೋ ಹೇಳಿದ ಮಾತಿಗೆ ಕಿವಿಗೊಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಎಷ್ಟು ಭದ್ರ ಎಂಬುದು ನನಗೆ ಗೊತ್ತು ಎಂದು ಹೇಳಿದರು.
ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗ್ತಾರೆ. ‘ಇದೆಲ್ಲಾ ಸುಳ್ಳು’,. ಹಾಗೆಯೇ ಒಂದಿಷ್ಟು ಮಂದಿ ಶಾಸಕರು ಹೈದರಾಬಾದ್ ಅಲ್ಲಿ-ಇಲ್ಲಿ ಹೋಗಿದ್ದಾರೆ ಎಂದು ಊಹಾಪೋಹಗಳು ಬರುತ್ತಿವೆ ಆ ಶಾಸಕರು ಎಲ್ಲೂ ಹೋಗಿಲ್ಲ ಎಲ್ಲರೂ ಇಲ್ಲಿಯೇ ಇದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








