ದಾವಣಗೆರೆ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಮರಗಳ ಕಡಿತಲೆಗೆ ಚಾಲನೆ ನೀಡಲಾಗಿದ್ದು, ಕಡಿದ ಮರಕ್ಕೆ ಪ್ರತಿಯಾಗಿ ಸಸಿ ನೆಡಲು ಯಾವುದೇ ಕ್ರಮವನ್ನು ಪಾಲಿಕೆ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ ಆರೋಪಿಸಿದ್ದಾರೆ.
ಸ್ಮಾರ್ಟ್‍ಸಿಟಿ ಯೋಜನೆಯಡಿ ದಾವಣಗೆರೆಯ ಚಾಮರಾಜ ಪೇಟೆ ಮತ್ತು ಚೌಕೀಪೇಟೆ ರಸ್ತೆ ಕಾಮಗಾರಿಗಾಗಿ ರಸ್ತೆಯ ಎರಡು ಬದಿಯ ಮರಗಳ ಕಡಿತಲೆಗೆ ಪಾಲಿಕೆ ಆಯುಕ್ತರು ಆದೇಶ ನೀಡಿದ್ದಾರೆ. ಈ ಆದೇಶ ಪ್ರತಿಯಲ್ಲಿ ಮರಗಳ ಕಡಿದ ಮೇಲೆ ಹೊಸ ಸಸಿಗಳ ನೆಡಲು ಯಾವ ರೀತಿ ಕ್ರಮ ವಹಿಸಿದ್ದಾರೆ ಎಂಬುದನ್ನು ಮಾತ್ರ ಎಲ್ಲೂ ಸಹ ತೋರಿಸಿಲ್ಲ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಪರಿಸರ ಪ್ರೇಮಿಗಳು ಅಧಿಕಾರಿಗಳಿಗೆ ಕರೆ ಮಾಡಿದರೆ, ಪರಿಸರ ಪ್ರೇಮಿಗಳಿಗೆ ಸ್ಪಂದಿಸದೇ ಅರಣ್ಯ ಇಲಾಖೆ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ತಕ್ಷಣವೇ ಅಧಿಕಾರಿಗಳು ಸಸಿ ನೆಡುವ ಬಗ್ಗೆ ನಕ್ಷೆಯನ್ನು ತೋರಿಸಬೇಕೆಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ
