ಸಹಶಿಕ್ಷಕ ಗಂಗಾಧರ್ ಅವರಿಗೆ ಸನ್ಮಾನ

ಗುಬ್ಬಿ:

            ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತಲೂ ಸರ್ವ ಶ್ರೇಷ್ಠವಾದುದಾಗಿದ್ದು ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸುವ ಮೂಲಕ ಸಮಾಜದ ಸತ್ಪ್ರಜೆಗಳನ್ನು ರೂಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಎಸ್.ಡಿ.ಎಂ.ಸಿ ಅಧ್ಯಕ್ಷೆ ಲೀಲಾಮೂರ್ತಿ ಕರೆನೀಡಿದರು.

           ತಾಲ್ಲೂಕಿನ ಜಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19 ನೇ ಸಾಲಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಯ ಸಹಶಿಕ್ಷಕ ಗಂಗಾಧರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಶಿಕ್ಷಕರು ಸಮಾಜದ ಸತ್ಪ್ರಜೆಗಳನ್ನು ತಯಾರು ಮಾಡುವ ಶಿಲ್ಪಿಗಳಿದ್ದಂತೆ ಶಿಕ್ಷಕರ ಸೇವೆ ಮಹತ್ವ ಪೂರ್ಣವಾದುದೆಂದು ತಿಳಿಸಿದರು.

            ಮುಖ್ಯ ಶಿಕ್ಷಕಿ ಎಂ.ಆರ್.ಉಷಾ ಮಾತನಾಡಿ ಸಮಾಜದ ಸರ್ವತೋಮುಖ ಪ್ರಗತಿಗೆ ಶಿಕ್ಷಣ ಅನಿವಾರ್ಯವಾಗಿದ್ದು ಶಿಕ್ಷಕ ಸಮುದಾಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಆದರ್ಶ ವಿದ್ಯಾರ್ಥಿಗಳನ್ನು ರೂಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದ ಅವರು ನಮ್ಮ ಶಾಲೆಯ ಶಿಕ್ಷಕ ಗಂಗಾಧರ್ ಅವರ ಉತ್ತಮ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಶಾಲೆಗೆ ಸಂಧ ಗೌರವವಾಗಿದೆ ಎಂದು ತಿಳಿಸಿದರು.

            ಇದೆ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಗಂಗಾಧರ್ ಅವರನ್ನು ಶಾಲೆಯ ಶಿಕ್ಷಕರು ಹಾಗೂ ಎಸ್.ಡಿ.ಎಂಸಿ ವತಿಯಿಂಸ ಸನ್ಮಾನಿಸಲಾಯಿತು.

             ಕಾರ್ಯಕ್ರಮದಲ್ಲಿ ಅದ್ಯಾಪಕರುಗಳಾದ ಮಂಜುಳ, ಫರೀಧಾ ಸುಲ್ತಾನ್ ಖಾನಂ, ವಸಂತಕುಮಾರಿ, ಎಸ್.ಡಿ.ಎಂಸಿ ಸದಸ್ಯರಾದ ಹೆಚ್.ಕೆ.ಪರಮೇಶ್, ಶಿವರುದ್ರಯ್ಯ, ಮಹಾಲಕ್ಷ್ಮಮ್ಮ ಮುಂತಾದವರು ಭಾಗವಹಿಸಿದ್ದರು.
ಪೋಟೋ4:ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19 ನೇ ಸಾಲಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಯ ಸಹಶಿಕ್ಷಕ ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap