ಸಾಮಾಜಿಕ ಚಿಂತಕ, ದಾರ್ಶನಿಕ ಡಿ.ದೇವರಾಜ ಅರಸು ಜನ್ಮ ದಿನಾಚರಣೆ

ತಿಪಟೂರು

            ಸಾಮಾಜಿಕ ಚಿಂತಕ, ದಾರ್ಶನಿಕ, ಸಮಾಜ ಚಿಕಿತ್ಸಕ, ಜಾತ್ಯತೀತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸ್‍ರವರ ಜನ್ಮದಿನಾಚರಣೆಯನ್ನು ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಚರಿಸಲಾಯಿತು.

             ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಹೊನ್ನಾಂಜಿನಯ್ಯ ರವರು ಮಾತನಾಡುತ್ತಾ ಆಗಸ್ಟ್ 16ರಂದು ನಿಧನ ಹೊಂದಿದ ಅಟಲ್ ಬಿಹಾರಿ ವಾಜಪೇಯಿರವರ ಸಾವಿಗೆ ಇಡೀ ವಿಶ್ವದ ನಾಯಕರುಗಳು ಹೇಗೆ ಸಂತಾಪ ವ್ಯಕ್ತಪಡಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದರೋ ಅಂತಹ ವ್ಯಕ್ತಿತ್ವವನ್ನೇ ಡಿ.ದೇವರಾಜ ಅರಸುರವರು ಹೊಂದಿದ್ದರು. ಅವರು ಮೂಲತಃ ಕೃಷಿಕರಾಗಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿದ್ದವರು. ಅವರನ್ನು ರಾಜಕಾರಣವನ್ನು ಹುಡುಕಿಕೊಂಡು ಹೋದವರಲ್ಲ, ರಾಜಕಾರಣವೇ ಅವರನ್ನು ಹುಡುಕಿಕೊಂಡು ಹೋಯಿತು ಎಂದರೆ ತಪ್ಪಾಗಲಾರದು. ಅವರು ಹಿಂದುಳಿದ ವರ್ಗದವರ ದಾರಿದೀಪವಾದರು. ಅಂದಿನ ಕಂದಾಯ ಮಂತ್ರಿಗಳಾಗಿದ್ದ ಹುಚ್ಚಮಾಸ್ತಿಗೌಡರೊಂದಿಗೆ ಅವರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಸೂಕ್ತವಾಗಿ ಬಳಸಿಕೊಂಡು ಎಲ್ಲರಿಗೂ ಸಮಬಾಳು-ಸಮಪಾಲು ಎನ್ನುವಂತೆ ಭೂಮಿಯನ್ನು ಎಲ್ಲರಿಗೂ ದೊರೆಯುವಂತೆ ಮಾಡಿದ್ದು ಇಲ್ಲಿ ಸ್ಮರಿಸಬಹುದು. ಅವರು ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕೈಗೊಂಡ ನಿಲುವುಗಳು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಕೊಟ್ಟಿದ್ದೇ ಅವರು ಎಂದರು.

                ಈ ಸಂದರ್ಭದಲ್ಲಿ ಮಾತನಾಡಿದ ಬಿ.ಇ.ಓ ಮಂಗಳಗೌರಮ್ಮನವರು ನಮ್ಮ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಡಿ.ದೇವರಾಜು ಅವರ ನೀತಿಗಳನ್ನು ನಾವು ಪಾಲಿಸಿದರೆ ಸಾಕು ದೇಶವು ಅಭಿವೃದ್ಧಿಯಾಗುತ್ತದೆ. ಅವರ ನೀತಿಗಳನ್ನು ನಾವು ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವವೆಂದರು

                ಗೋವಿಂದರಾಜು ಮಾತನಾಡಿ ಡಿ.ದೇವರಾಜ ಅರಸು ರವರು ರಾಜ ಮನೆತನತದ ಒಡನಾಟವಿದ್ದರು ಎಂದು ಅವರು ಗರ್ವಿಯಾಗಿರಲಿಲ್ಲ. ಅವರು ರೈತರಾಗಿಯೇ ತಮ್ಮ ಜೀವನವನ್ನು ಸವೆಸುತ್ತಿದ್ದವರನ್ನು ರಾಜಕಾರಣವೇ ಹುಡುಕಿಕೊಂಡು ಹೋದಂತಹ ನಾಯಕರು. ಅವರು ಪ್ರಧಾನಿಯಾಗದಿದ್ದುದೇ ನಮ್ಮ ದುರಾದೃಷ್ಟ, ಅಂತಹ ನಾಯಕರು ಸಿಗುವುದು ನಮಗೆ ಅಪರೂಪ ಎಂದರು.
ಈ ಸಂದರ್ಭದಲ್ಲಿ ಅವರು ಸರ್ಕಾರದ ಮುಂದೆ 3 ಬೇಡಿಕೆಗಳನ್ನು ಇಟ್ಟರು.
1) ಜಾತಿವಾರು ಗಣತಿ, ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿ, ಸಾಮಾನ್ಯ ಜನರ ಸ್ಥಾನಮಾನವು ಸರಿಯಾಗಿ ತಿಳಿದು ಮೀಸಲಾತಿಗೆ ಅನುಕೂಲವಾಗುತ್ತದೆ.
2) ನಗರಸಭೆ ಚುನಾವಣೆಗಳಲ್ಲಿ ಪ್ರಬಲ ಸಮುದಾಯಗಳಿಗೆ ಮೀಸಲಾತಿ ಕೊಡುವಂತೆಯೇ 2ಎನಲ್ಲಿ ಬರುವ ಜಾತಿಗಳಾದ ಸವಿತಾಸಮಾಜ, ಮಡಿವಾಳ ಮುಂತಾದವುಗಳಿಗೂ ಮೀಸಲಾತಿ ನೀಡಬೇಕು.
3) ರೈತರ ಸಾಲದ ಜೊತೆಗೆ ಹಿಂದುಳಿದ ವರ್ಗಗಳ ಸಾಲವನ್ನು ಸಹ ಮನ್ನಾಗೊಳಿಸ ಬೇಕೆಂದು.

            ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟು ಇವುಗಳನ್ನು ಶೀಘ್ರವಾಗಿ ಈಡೇರಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸ್ತೇದಾರ್ ಪರಮೇಶ್ವರಯ್ಯ, ತಾಲ್ಲೂಕು ವಿಸ್ತರಣಾಧಿಕಾರಿ, ಜಯಸಿಂಹ, ಸಮಾಜ ಕಲ್ಯಾಣ ಅಧಿಕಾರಿ ದಿನೇಶ್‍ಕುಮಾರ್, ಸಿ.ಡಿ.ಪಿ.ಓ ಓಂಕಾರಪ್ಪ, ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು, ನೌಕರರುಗಳು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link