“ಸಾಮಾಜಿಕ ಬದಲಾವಣೆಯ ಕಡೆ ನಮ್ಮ ನಡಿಗೆ”

ತುಮಕೂರು

              ಸಮಾನ ಮಕ್ಕಳ ಮಂಟಪದವತಿಯಿಂದ ದಿನಾಂಕ-5-9-2018ರಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಾವಿತ್ರಿ ಬಾಪುಲೆ ರವರನ್ನು ಮಕ್ಕಳಿಗೆ ನೆನಪಿಸುತ್ತ ದಿಬ್ಬೂರು ಮತ್ತು ನಿರ್ವಾಣಿ ಲೇಔಟ್‍ಗಳಲ್ಲಿ ನಗರ ವಂಚಿತ ಯುವಜನಸಂಪನ್ಮೂಲ ಕೇಂದ್ರದ ಶ್ರೀಮತಿ ಲತಾ ಮಾತನಾಡಿ ದೇಶದಲ್ಲೇ ಮೊಟ್ಟಮೊದಲ ಶಿಕ್ಷಕಿಯಾಗಿ ಸಾಮಾಜಿಕ ಬದಲಾವಣೆಗೆ ದಿಟ್ಟ ಹೋರಾಟಗಾರ್ತಿಯಾಗಿ ಎಲ್ಲಾ ಜಾತಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಇಡೀ ಜೀವನವನ್ನೆ ಮುಡಿಪಿಟ್ಟು ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ಮೆಟ್ಟಿನಿಂತ ದಿಟ್ಟ ಹೋರಾಟಗಾರ್ತಿ ಸಾವಿತ್ರಿ ಬಾಪುಲೆ ಇಡೀ ಶೋಷಿತ ಸಮುದಾಯಕ್ಕೆ ಶಿಕ್ಷಣದ ಬುನಾದಿಯನ್ನು ಹಾಕಿಕೊಟ್ಟ ಮೊಟ್ಟ ಮೊದಲ ಅಕ್ಷರದವ್ವ ಮಹಾನ ಚೇತನ ಸಾವಿತ್ರಿಬಾಪುಲೆ ಇವತ್ತಿನ ಕಾಲಘಟ್ಟದ ಪ್ರತಿಯೋರ್ವ ಶೋಷಿತ ಮಹಿಳೆಯರು ಸಾವಿತ್ರಿ ಬಾಪುಲೆ ರವರನ್ನು ಸ್ಮರಸಿಬೇಕು, ಅವರ ಸಾಮಾಜಿಕ ಬದಲಾವಣೆಯ ಹೋರಾಟದ ಕಿಚ್ಚನ್ನು ಪ್ರಸಕ್ತ ಮಹಿಳಾ ವಿದ್ಯಾರ್ಥಿಗಳು.ಹೋರಾಟಗಾರರು ಮತ್ತು ಶಿಕ್ಷಕರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
              ನಂತರ ಮಾತನಾಡಿದ ಗಾಯತ್ರಿ ರವರು ಇವತ್ತಿನ ಕಾಲಘಟಟ್ಟದಲ್ಲಿ ಶಿಕ್ಷಣದ ಖಾಸಗೀಕರಣದಿಂದ ತಳಸಮುದಾಯದ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಸರ್ಕಾರಿ ಶಾಲೆಗಳನ್ನು ಸರ್ಕಾರ ಉಳಿಸುವ ಮತ್ತು ಅಭಿವೃದ್ಧಿ ಪಡಿಸುವುದರ ಜೊತೆಗೆ ಮಕ್ಕಳ ಆರೋಗ್ಯಕರ ಶಿಕ್ಷಣದ ಬೆಳವಣಿಗೆಗೆ ಹೆಚ್ಚು ಗಮನಹರಿಸಬೇಕು, ಹಾಗೂ ದಿಬ್ಬೂರಿನಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಸಮುದಾಯ ಶೌಚಾಲಯ, ಅಂಗನಾವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾರಿಗೆ ಸಂಪರ್ಕದ ವ್ಯವಸ್ಥೆ ಬಹಳ ಅವಶ್ಯಕವಾಗಿದೆ, ಶಿಕ್ಷಕರ ದಿನಾಚರಣೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚು ಹೊತ್ತು ನೀಡಬೇಕಾಗಿದೆ ಎಂದರು.
         ಈ ಸಂದರ್ಭದಲ್ಲಿ ಸಮಾನ ಮಕ್ಕಳ ಮಂಟಪದ ಪ್ರತಿನಿಧಿಗಳಾದ ಮಂಜುನಾಥ್ ,ಸುನೀಲ್ ,ರಾ ಧ, ಕಾಂತರಾಜ್ ,ಬಿಂಧು ,ಪ್ರಜ್ವಲ್ ,ಜಹೀರ್, ದಿಬ್ಬೂರಿನ ಜ್ಯೋತಿ,ನಂದಿನಿ,ರಿಂದ್ಯಾ ಹಾಗೂ ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದ ಅರುಣ್,ಗಾಯಿತ್ರಿ,ಶೃತಿ, ಮುಖಂಡರಾದ ಸುರೇಶ್, ಗಂಗಮ್ಮ,ರಾಜಮ್ಮ,ಲಲಿತಮ್ಮ, ಸೌಮ್ಯ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link