ತುಮಕೂರು :
ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದಿಂದ ತ್ರಿಮತಸ್ಥ ಬ್ರಾಹ್ಮಣರೆಲ್ಲರಿಗೂ ಸಾಮೂಹಿಕ ಋಗ್ವೇದ ಉಪಾಕರ್ಮವನ್ನು ವೇದ ವಿದ್ವಾಂಸರುಗಳಾದ ಮುಳುಕುಂಟೆ ರಂಗನಾಥ್, ಎಂ.ಕೆ.ನಾಗರಾಜರಾವ್ ಮತ್ತು ಸಿ.ಎನ್.ರವೀಂದ್ರಮೂರ್ತಿ ಅವರುಗಳ ಮಾರ್ಗದರ್ಶನದಲ್ಲಿ ತುಮಕೂರಿನ ಉಪ್ಪಾರಹಳ್ಳಿ – ಶಿವಮೂಕಾಂಬಿಕಾ ನಗರದ 3ನೇ ಮುಖ್ಯರಸ್ತೆಯಲ್ಲಿರುವ ಹೆಚ್.ಎಸ್.ರಾಘವೇಂದ್ರರವರ (ಮೊ : 9739508838) ಮಲ್ಹಾರಿ ಕೃಪ ನಿವಾಸದಲ್ಲಿರುವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಹೋಮ ಹವನಗಳ ಸಹಿತ ಸಾಂಗವಾಗಿ ನಡೆಯಿತು. 25 ಕ್ಕೂ ಹೆಚ್ಚು ವಿಪ್ರ ಬಾಂಧವರು ಉಪಾಕರ್ಮ ವಿಧಿಯನ್ನು ನೆರವೇರಿಸಿದರು. ಸಂಘದ ಅಧ್ಯಕ್ಷ ಎನ್.ಸತ್ಯನಾರಾಯಣ ಮತ್ತು ಖಜಾಂಚಿ ಬಿ.ವಿ.ಕೃಷ್ಣಮೂರ್ತಿ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ