ಇಸ್ಲಮಾಬಾದ್:
ಪಾಕಿಸ್ಥಾನಕ್ಕೆ ಜೀವ ರಕ್ಷಕದಂತೆ ಇದ್ದ ಅಮೇರಿಕಾ ದೇಶದ ಆರ್ಥಿಕ ನೆರವಿನ ಕೊಂಡಿ ಕಳಚಿಬೀಳುತ್ತಲೇ ತನ್ನ ಪೊಳ್ಳು ಪ್ರತಿಷ್ಠೆಯನ್ನು ಬಿಟ್ಟು ತನ್ನ ದೇಶವನ್ನು ನಡೆಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಅಳಲು ತೋಡಿಕೊಂಡಿದ್ದಾರೆ . ಉನ್ನತ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ದೇಶದ ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡುವ ಬದಲು ನಷ್ಟ ಉಂಟುಮಾಡುವ ಯೋಜನೆಗಳನ್ನು ಕೈಗೊಂಡು ದೇಶದ ಆರ್ಥಿಕತೆಗೆ ಭಾರೀ ಹಾನಿ ಉಂಟುಮಾಡಿದೆ ಎಂದು ಇಮ್ರಾನ್ ಖಾನ್ ಹೇಳಿದರು.ದೇಶದ ಜನಸಂಖ್ಯೆಯ ಬಹುಪಾಲು ಜನರು ಯುವಕರಾಗಿದ್ದು ಅವರು ಉದ್ಯೋಗಗಳನ್ನು ಎದುರು ನೋಡುತ್ತಿದ್ದಾರೆ. ದೇಶ ಸಾಧ್ಯವಾದಷ್ಟು ಬೇಗನೆ ಸಾಲದ ಹೊರೆಯಿಂದ ಮುಕ್ತವಾಗಬೇಕಿದೆ ಎಂದು ಹೇಳಿದ್ದಾರೆ