ಸಾಲಸೌಲಭ್ಯಕ್ಕೆ ರಾಜಕಾರಣ ಅಡ್ಡಿಯಾಗಬಾರದು

ಎಂ ಎನ್ ಕೋಟೆ

               ಯಾವುದೇ ಜಾತಿ , ರಾಜಕೀಯ ಮಾಡದೆ ಎಲ್ಲ ರೈತರಿಗೂ ಸಾಲ ಸೌಲಭ್ಯವನ್ನು ಕೊಡಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

                 ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಾಡಿನ ಜನರ ಅಬಿವೃದ್ಧಿಗೋಸ್ಕರ ಸಹಕಾರಿ ಸಂಘಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಮುಂದೆ ಬರಬೇಕು. ಸಹಕಾರಿ ಸಂಘಗಳಲ್ಲಿ ಪ್ರತಿಯೊಬ್ಬ ರೈತರಿಗೂ ಕೂಡ ಸಾಲ ಸೌಲಭ್ಯವನ್ನು ಕೊಡಬೇಕು.

                 ಸಿದ್ದರಾಮಯ್ಯನವರ ಸರ್ಕಾರದಲ್ಲಿ ರೈತರಿಗೋಸ್ಕರ ಎರಡು ಸಲ ಸಾಲಮನ್ನಾ ಮಾಡಿದ್ದೇವೆ. ನಮ್ಮ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡ ಪ್ರತಿಯೊಬ್ಬ ರೈತರ ಸಾಲ ಮನ್ನಾ ಆಗಿದೆ. ಸಹಕಾರಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಒಂದು ಲಕ್ಷದವರೆಗೆ ಸಾಲಮನ್ನಾ ಆಗುತ್ತದೆ. ನಮ್ಮ ಜಿಲ್ಲೆಯಲ್ಲಿ 238 ಸಹಕಾರಿ ಸಂಘಗಳು ಇವೆ. ಇವತ್ತು ಇಡೀ ದೇಶಕ್ಕೆ ನಾವು ಮಾದರಿಯಾಗಿದ್ದೇವೆ. ಆದ್ದರಿಂದ ಹಾಗಲವಾಡಿ ಹಿಂದೂಳಿದ ಪ್ರದೇಶವಾದ್ದರಿಂದ ನೂತನವಾಗಿ ಕಟ್ಟಡವನ್ನು ನಿರ್ಮಾಣವಾಗಿದೆ, ಇದರ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಜೊತೆಗೆ ನಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಇದಕ್ಕೆ ಪೋಷಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

                    ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್‍ದೇವ್ , ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ , ತಾಲ್ಲೂಕ್ ಪಂಚಾಯಿತಿ ಸದಸ್ಯ ಯೋಗೀಶ್ , ಗ್ರಾಮ ಪಂಚಾಯಿತಿ ಸದಸ್ಯ ಶಾಮಿಯಾನ ಸಿದ್ದಲಿಂಗಪ್ಪ , ಟಿಎಪಿಸಿಎಂಎಸ್ ಅಧ್ಯಕ್ಷ ಕಿಡಿಗಣ್ಣಪ್ಪ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿಂಗದಹಳ್ಳಿ ರಾಜ್ ಕುಮಾರ್ , ಸಂಘದ ಕಾರ್ಯದರ್ಶಿ ತಿಪ್ಪೆಸ್ವಾಮಿ , ಮುಖಂಡರಾದ ಪರಮೇಶ್ವರಪ್ಪ , ಗುರುಸಿದ್ದಪ್ಪ , ಗುರುರೇಣುಕರಾಧ್ಯ , ರಮೇಶ್ , ಅರುಣ್ ಕುಮಾರ್ , ಸಂಘದ ಸದಸ್ಯರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap