ಬರಗೂರು 
ಸಾಲ ಬಾಧೆಯಿಂದ ಮನನೊಂದು ರೈತನೋರ್ವ ತನ್ನ ಜಮೀನಿನ ಗುಡಿಸಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ಸಿರಾ ತಾಲ್ಲೂಕು ಬರಗೂರು ಸಮೀಪದ ನಿಡಗಟ್ಟೆ ಗೇಟ್ ಬಳಿ ನಡೆದಿದೆ,
ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಗಂಡಿಹಳ್ಳಿ ಗ್ರಾಮದ ರೈತ ಲಿಂಗಣ್ಣ (40) ಮೃತ ದುರ್ದೈವಿ ಎಂದು ಗುರ್ತಿಸಲಾಗಿದೆ. ಜಮೀನಿನ ಅಭಿವೃದ್ದಿಗಾಗಿ ತನ್ನ ತಾಯಿ ದೊಡ್ಡಲಿಂಗಮ್ಮನ ಹೆಸರಿನಲ್ಲಿ ದೊಡ್ಡಹುಲಿಕುಂಟೆಯ ಗ್ರಾಮೀಣ ಬ್ಯಾಂಕ್ ನಲ್ಲಿ ಸುಮಾರು 1 ಲಕ್ಷದ 64 ಸಾವಿರ ರೂ. ಹಾಗೂ ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಸಂಘ ಮತ್ತು ಕೈಸಾಲಗಳು ಸೇರಿ ಸುಮಾರು 5 ಲಕ್ಷ ರೂ ಸಾಲಮಾಡಿದ್ದಾರೆ. ತನ್ನ 2 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು, ಸಕಾಲಕ್ಕೆ ಮಳೆ ಬೆಳೆಯಾಗದೆ ತಾನು ಮಾಡಿದ ಸಾಲವು ಬಡ್ಡಿ ಸೇರಿ ದಿನೆ ದಿನೆ ಹೆಚ್ಚ್ಚಾಗುತ್ತಿತ್ತು. ಸಾಲ ತೀರಿಸುವ ದಾರಿಗಾಣದೆ ರೈತ ಲಿಂಗಣ್ಣ ತನ್ನ ಜಮೀನಿನಲ್ಲಿನ ಗುಡಿಸಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿದ್ದಾನೆ ಎನ್ನಲಾಗಿದೆ. ಲಿಂಗಣ್ಣನಿಗೆ ಅಣ್ಣ, ತಮ್ಮ, ತಂಗಿ ಇದ್ದು ಇವರಿಗೆ ಇನ್ನೂ ಮದುವೆಯಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪಿಎಸ್ಐ ನಿರ್ಮಲ ಭೇಟಿ ನೀಡಿ, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








