ತುಮಕೂರು:
ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿಂದ ಸಂಬಳ ಸಿಗದೇ ಇರುವುದರಿಂದ ವಾಹನ ಚಾಲಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆಯಲ್ಲಿ 45ಕ್ಕೂ ಹೆಚ್ಚು ವಿವಿಧ ವಾಹನಗಳ ಚಾಲಕರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಗುತ್ತಿಗೆ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಪಾಲಿಕೆ ವೇತನವನ್ನು ನೀಡಿಲ್ಲ, ಗುತ್ತಿಗೆದಾರರು ಸಹ ವಾಹನ ಚಾಲಕರಿಗೆ ವೇತನವನ್ನು ಪಾವತಿಸಿಲ್ಲ.
ಇನ್ನೊ ಹತ್ತು ದಿನ ಕಳೆದರೆ ಸಂಬಳ ಕೊಟ್ಟು ನಾಲ್ಕು ತಿಂಗಳಾಗುತ್ತದೆ, ವೇತನವಿಲ್ಲದೆ ದುಡಿಯುತ್ತಿದ್ದೆವೆ, ಮಕ್ಕಳ ಫೀಸು, ದಿನಸಿ ಹೀಗೆ ದಿನನಿತ್ಯದ ಅವಶ್ಯಕತೆಗೂ ಹಣವಿಲ್ಲದಂತಾಗಿದ್ದು, ಪಾಲಿಕೆ ಮೂರು ತಿಂಗಳ ವೇತನವನ್ನು ಪಾವತಿಸಿದರೆ ಮಾಡಿಕೊಂಡಿರುವ ಸಾಲವನ್ನಾದರೂ ತೀರಿಸಬಹುದು ಎಂದು ಚಾಲಕರೊಬ್ಬರು ತಿಳಿಸಿದರು.
ವೇತನ ಪಾವತಿಸುವಂತೆ ಒತ್ತಾಯಿಸಿ ವಾಹನ ಚಾಲಕರು ಇಂದು ಪಾಲಿಕೆ ವಾಹನವನ್ನು ಓಡಿಸುವುದಿಲ್ಲ ಎಂದಾಗ, ಪಾಲಿಕೆ ಅಧಿಕಾರಿಗಳು ಒಂದು ತಿಂಗಳ ವೇತನವನ್ನು ಪಾವತಿಸುವುದಕ್ಕೆ ಒಪ್ಪಿಕೊಂಡಿದೆ, ಆದರೆ ಬಾಕಿ ಉಳಿದಿರುವ ವೇತನವನ್ನಾಗಲಿ, ಹತ್ತು ದಿನದ ನಂತರದ ತಿಂಗಳ ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಬಗ್ಗೆ ಅಧಿಕಾರಿಗಳು ಏನು ಹೇಳುವುದಿಲ್ಲ ಎಂದು ದೂರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
