ತುಮಕೂರು :
ಭಾರತ ಸಂಚಾರ ನಿಗಮವು ತಾಂತ್ರಿಕ ಕಾರಣಗಳಿಂದಾಗಿ ಬರುವ ಸೆಪ್ಟೆಂಬರ್ 5 ರಿಂದ ಸಿಡಿಎಂಎ (ಫಿಕ್ಸ್‍ಡ್ ವೈರ್‍ಲೆಸ್ ಟೆಲಿಫೋನ್) ಸೇವೆಯನ್ನು ಹಿಂಪಡೆಯಲಾಗುತ್ತದೆ. ನಿಗಮದ ಎಲ್ಲಾ ಸಿಡಿಎಂಎ ಗ್ರಾಹಕರು ಸೆಪ್ಟೆಂಬರ್ 5 ರೊಳಗಾಗಿ ಬಿಎಸ್‍ಎನ್‍ಎಲ್‍ನ ಬೇರೆ ಸೇವೆಗಳಾದ ಜಿಎಸ್‍ಎಂ/ಎಫ್‍ಟಿಟಿಹೆಚ್‍ಗೆ ಬದಲಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಮಾರಾಟ ವಿಭಾಗದ ಎಸ್.ಡಿ.ಇ./ಡಿ.ಇ. ಅಥವಾ ದೂರವಾಣಿ ಸಂಖ್ಯೆ 9449003700/ 9449858988 ಅನ್ನು ಅಥವಾ ಹತ್ತಿರದ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬೇಕೆಂದು ನಿಗಮದ ಮಹಾಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.