ಸಿದ್ದರಾಮಯ್ಯ ಹೊಸ ಬಾಂಬ್

ಹಾಸನ:

              ಕಳೆದ ಚುನಾವಣೆಯಲ್ಲಿ ಸೋತ ಮೇಲೆ ಮೈತ್ರಿಗೆ ವಲ್ಲದ ಮನಸ್ಸಿನಿಂದ ಒಪ್ಪಿದ್ದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ಧು ಮಾಡುತ್ತಿದೆ .

               ಹಾಸನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜಕೀಯ ಎನ್ನುವುದು ಕಲುಶಿತಗೊಂಡು  ಹಣ, ಜಾತಿಯ ಆಧಾರದ ಮೇಲೆ ನಿಂತಿದೆ, ಇದು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ, ಒಂದು ಹುದ್ದೆಯನ್ನು ಅಲಂಕರಿಸಿದ ಮೇಲೆ    ಜಾತ್ಯಾತೀತರಾಗಿ  ಕೆಲಸ ಮಾಡಬೇಕಾಗುತ್ತದೆ.

                ಯಾವುದೋ ಒಂದು  ಧರ್ಮಕ್ಕೆ ಸೀಮಿತವಾಗಿ ಕೆಲಸ ಮಾಡಿದರೆ ಜನನಾಯಕ ಎಂದು ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜನರು ಉತ್ತಮ ಕೆಲಸ ಮಾಡುವವರನ್ನು ಗೆಲ್ಲಿಸಬೇಕು, ನಾನು ಮತ್ತೆ ಮುಖ್ಯಮಂತ್ರಿಯಾಗಬಾರದು ಎಂದು ಎಲ್ಲರೂ ಒಂದಾಗಿದ್ದಾರೆ, ಒಳಗೊಳಗೆ ಪಿತೂರಿಗಳು ಸಾಕಷ್ಟು ನಡೆಯುತ್ತಿರುತ್ತದೆ ಎಂದು ತಮ್ಮ ಮನದಾಳದ ಮಾತನ್ನು ಸುದ್ಧಿಗಾರರೊಂದಿಗೆ ಹಂಚಿಕೊಂಡರು.

Recent Articles

spot_img

Related Stories

Share via
Copy link