ಸಿದ್ದರಾಮೋತ್ಸವ ಬೆನ್ನಲ್ಲೇ ಬೆಂಗಳೂರಿಗೆ ಅಮಿತ್ ಶಾ ಎಂಟ್ರಿ : ಏನಿದು ರಾಜಕೀಯ ರಣತಂತ್ರ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಅದ್ದರೂರಿಯಾಗಿ ಆಯೋಜಿಸಿದ್ದಾರೆ. ಇದರ ಮೂಲಕ ವಿರೋಧಿಗಳಿಗೆ ಶಕ್ತಿ ಪ್ರದರ್ಶಸಿ ಸಮದೇಶವನ್ನು ನೀಡಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.

ಸಿದ್ದರಾಮೋತ್ಸವ ಬೆನ್ನಲ್ಲೇ ಬೆಂಗಳೂರಿಗೆ ರಾಜಕೀಯ ಚಾಣಾಕ್ಷ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಸಂಜೆ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ. ಆದರೆ ಬಿಜೆಪಿಯ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ರಾಜ್ಯದ ಜನತೆ, ಹಾಗೂ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಟಾನಿಕ್ ನೀಡಲು ಅಮಿತ್ ಶಾ ರಾಜಧಾನಿಗೆ ಆಗಮಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಮಾಡಲಾಗುತ್ತಿದೆ.

ಬಿಜೆಪಿ ಡ್ಯಾಮೇಜ್ ಸರಿಪಡಿಸಲು ಶಾ ಎಂಟ್ರಿ :

ಮಂಗಳೂರಿನ ಬೆಳ್ಳಾರಿಯಲ್ಲಿ ಅದೊಂದು ದುರ್ಘಟನೆ ಸಂಭವಿಸದೇ ಹೋಗಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಜನೋತ್ಸವವನ್ನು ಆಚರಿಸಿ ಕಾಂಗ್ರೆಸ್ ಗೂ ಮುನ್ನವೇ ಬಿಜೆಪಿ ರಾಜ್ಯದಲ್ಲಿ ತನ್ನ ಬಲ ಪ್ರದರ್ಶನ ಮಾಡಬೇಕಿತ್ತು. ಆದರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಿಂದಾಗಿ ಈ ಕಾರ್ಯಕ್ರಮ ಕೂಡ ರದ್ದಾಯಿತು. ಅಲ್ಲದೇ ಅನೇಕ ಹಿಂದೂ ಕಾರ್ಯಕರ್ತರು ಬಿಜೆಪಿ ಯುವ ಮೋರ್ಚಾದಲ್ಲಿ ರಾಜೀನಾಮೆ ನೀಡಿದ್ದರು. ಸ್ವಪಕ್ಷದ ಕೆಲವು ಪ್ರಭಾವಿ ಮುಖಂಡರೇ ಬಿಜೆಪಿ ವಿರುದ್ಧವಾಗಿ ಹೇಳಿಕೆ ನೀಡಲು ಆರಂಬಿಸಿದರು. ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಬಾರಿ ದೊಡ್ಡ ತಲೆನೋವನ್ನು ತಂದೊಡ್ಡಿದೆ.

ತೇಜಸ್ವಿ ಸೂರ್ಯ ಹೇಳಿಕೆಗೆ ಕೆಂಡಮಂಡಲವಾದ ಕಾಂಗ್ರೆಸ್ :

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡಿಬೋದಿತ್ತು ಎಂದು ಹೇಳಿದ ಆಡಿಯೋವೊಂದು ವೈರಲ್ ಆಗಿದ್ದೇ ತಡ ವಿಪಕ್ಷಗಳು ಬಿಜೆಪಿ ನಾಯಕರನ್ನು ಲೆಫ್ಟ್ ರೈಟ್ ತೆಗೆದುಕೊಂಡಿವೆ. ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಮುಸ್ಲಿಂ ಯುವಕನ ಸಾವು ಕೂಡ ಭಾರೀ ದೊಡ್ಡ ಪ್ರಮಾಣದಲ್ಲಿ ಆಕ್ರೋಶಕ್ಕೆ ಕಾರಣವಾಯ್ತು. ಪ್ರವೀಣ್ ನೆಟ್ಟಾರು ಅಂತಿಮ ದರ್ಶನ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವಾರದ ಅಂಗಾರ, ಸುನೀಲ್ ಕುಮಾರ್ ಸೇರಿದಂತೆ ಅನೇಕರು ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತ್ತು.

ಈ ಎಲ್ಲದರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಜನತೆಗೆ ಬಿಜೆಪಿ ಸರ್ಕಾರದ ಮೇಲೆ ಉಂಟಾಗಿರುವ ಅಸಮಾಧಾನಗಳನ್ನು ತಣಿಸದ ಹೊರತು ಮುಂದಿನ ಚುನಾವಣೆಯಲ್ಲಿ ಗೆಲುವು ಸುಲಭವಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದೆ. ಇದೇ ಕಾರಣಕ್ಕೆ ಇಂದು ಅಮಿತ್ ಶಾ ಬೆಂಗಳೂರಿನತ್ತ ಆಗಮಿಸುತ್ತಿದ್ದು ಜನರ ವಿಶ್ವಾಸವನ್ನು ಮತ್ತೆ ಗಳಿಸಲು ವಿವಿಧ ರಣತಂತ್ರಗಳನ್ನು ಹೂಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಅಮಿತ್ ಶಾ ಭೇಟಿ ಹಿಂದಿನ ಉದ್ದೇಶಗಳೇನು?

  • ರಾಜ್ಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಅಮಿತ್ ಶಾ ಸಂಪೂರ್ಣ ವರದಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.
  • ಪಕ್ಷದೊಳಗೆ ಉಂಟಾಗಿರುವ ಅಸಮಧಾನ ಶಮನಕ್ಕೆ ಮುಂದಾಗಬಹುದು.
  • ಈ ಅಸಮಾಧಾನ ಹೋಗಲಾಡಿಸದೇ ಇದ್ದರೆ ವಿರೋಧ ಪಕ್ಷಗಳು ಇದನ್ನೇ ಲಾಭವಾಗಿ ಬಳಸಿಕೊಳ್ಳಬಹುದು. ಹಾಗಾಗಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಬಹುದು.
  • ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಗಿಯಲಿದೆ. ಹಾಗಾಗಿ ಇವರನ್ನೇ ಮುಂದುವರಿಸಬೇಕಾ ಅಥವಾ ಹೊಸಬರನ್ನು ನೇಮಕ ಮಾಡಬೇಕಾ? ಎಂಬುದರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
  • ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಕು ಎಂದು ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ.
  • ಇನ್ನೂ ಇದೇ ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ.

Recent Articles

spot_img

Related Stories

Share via
Copy link