ಹಗರಿಬೊಮ್ಮನಹಳ್ಳಿ:
ಪಟ್ಟಣದ ಸಿ.ಎಂ.ವಿಕ್ರಮ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (I.I.ಖಿ) ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಪಿ.ಹೆಚ್‍ಡಿ (ರೀಸರ್ಚ್ ಸ್ಕಾಲರ್) ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗೆ ಕರ್ನಾಟಕ ರಾಜ್ಯ ಸರ್ಕಾರವು 2 ಲಕ್ಷ ರೂಪಾಯಿ ಸ್ಕಾಲರ್‍ಶಿಪ್ ಮಂಜೂರು ಹಾಗೂ ಸ್ಯಾಮ್‍ಸಂಗ್ (ಆರ್.ಎನ್.ಡಿ) ಇನ್ಸಿಟ್ಯೂಟ್ ಆಫ್ ಇಂಡಿಯಾ ಕಂಪನಿ ರವರಿಂದ (ಸ್ಯಾಮ್‍ಸಂಗ್ ಇನೋವೇಶನ್ ಅವಾರ್ಡ್) ಸದರಿ ವಿದ್ಯಾರ್ಥಿಗೆ ಪ್ರಥಮ ಸ್ಥಾನ ಪ್ರಶಸ್ತಿ ಪ್ರಧಾನ ಹಾಗೂ ರೂ.1,20,000/- (ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು) ನಗದು ಬಹುಮಾನ ವಿತರಣೆ.
ಶ್ರೀಮತಿ ಸಿ.ಎಂ.ಸರ್ವಮಂಗಳ ಹಾಗೂ ಶ್ರೀ ಬಾಗಳಿ ಸಿ.ಎಂ.ವೀರಯ್ಯ ನಿವೃತ್ತ ಪಿ.ಎಸ್.ಐ (ಪ್ರಭಾರ) ಪೊಲೀಸ್ ಸ್ಟೇಟ್ ಇಂಟೆಲಿಜೆನ್ಸ್ ಹಗರಿಬೊಮ್ಮನಹಳ್ಳಿ ಪಟ್ಟಣ, ಬಳ್ಳಾರಿ ಜಿಲ್ಲೆ ರವರ ಪುತ್ರನಾದ ಸಿ.ಎಂ.ವಿಕ್ರಮ್ ಅಸ್ಸಾ ರಾಜ್ಯದ ಗುವಾಹಟಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐ.ಐ.ಟಿ) ಕೇಂದ್ರ ಸರ್ಕಾರದ ತಾಂತ್ರಿಕ ಮಹಾವಿದ್ಯಾಸಂಸ್ಥೆಯಲ್ಲಿ ಪಿ.ಹೆಚ್‍ಡಿ (ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ – ರೀಸರ್ಚ್ ಸ್ಕಾಲರ್) ವ್ಯಾಸಂಗ ಮಾಡುತ್ತಿದ್ದು, ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಭಾರತ ದೇಶದಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐ.ಐ.ಟಿ) ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ 2 ಲಕ್ಷ ರೂಪಾಯಿ ಸ್ಕಾಲರ್‍ಶಿಪ್ ನೀಡಲು ಆದೇಶ ಹೊರಡಿಸಿದ್ದರ ಮೇರೆಗೆ, ಸದರಿ ಸಿ.ಎಂ.ವಿಕ್ರಮ್ ಪಿ.ಹೆಚ್‍ಡಿ ವಿದ್ಯಾರ್ಥಿಯು ಆಯ್ಕೆಯಾಗಿದ್ದರಿಂದ, ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿಗೆ 2 ಲಕ್ಷ ರೂಪಾಯಿ ಸ್ಕಾಲರ್‍ಶಿಪ್ ಮಂಜೂರು ಮಾಡಿರುತ್ತಾರೆ.
ಸ್ಯಾಮ್‍ಸಂಗ್ (SAMSUNG) ಇನ್ನೋವೇಶನ್ ಅವಾರ್ಡ್ ನೀಡುವ ಬಗ್ಗೆ, ಸ್ಯಾಮ್‍ಸಂಗ್ (ಆರ್.ಎನ್.ಡಿ) ಇನ್ಸಿಟ್ಯೂಟ್ ಆಫ್ ಇಂಡಿಯಾ ಕಂಪನಿಯವರು ಗುವಾಹಟಿ ಐ.ಐ.ಟಿ.ಯಲ್ಲಿ “NASO SPEECH PROJECT WORK” ಬಗ್ಗೆ ಸ್ಪರ್ಧೆಯನ್ನು ಇತ್ತೀಚಿಗೆ ಏರ್ಪಡಿಸಿದ್ದರಿಂದ, ಸದ್ರಿ ವಿದ್ಯಾರ್ಥಿಯು ಸದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (FIRST PLACE) ಪ್ರಶಸ್ತಿ ಪ್ರಧಾನ ಪಡೆದಿದ್ದರಿಂದ ರೂ.1,20,000/- (ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ) ಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಿರುತ್ತಾರೆ.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ (ಪಿ.ಸಿ.ಎಂ.ಬಿ) ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ :-
ಸದರಿ ಸಿ.ಎಂ.ವಿಕ್ರಮ್ ವಿದ್ಯಾರ್ಥಿ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ಪ್ರೌಢಶಾಲೆಯಲ್ಲಿ 2005ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.94.24% ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಸದರಿ ಪಟ್ಟಣದ ಜಿ.ಬಿ.ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2007ನೇ ಸಾಲಿನಲ್ಲಿ ಪಿ.ಯು.ಸಿ. (ಪಿ.ಸಿ.ಎಂ.ಬಿ) ದ್ವಿತೀಯ ವರ್ಷದ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಶೇ.95% ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಬಳ್ಳಾರಿ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳ, ನೌಕರರ ಹಾಗೂ ಸಿಬ್ಬಂದಿಯವರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಹೊಂದಿ, ಜಿಲ್ಲೆಯ ಪೊಲೀಸ್ ಅಧಿಕಾರಿಗಳವರಿಂದ ಎಸ್.ಪಿ ಹಾಗೂ ಐ.ಜಿ.ಪಿ. ರವರಿಂದ ಪ್ರಶಸ್ತಿ ಪ್ರಧಾನ ಹಾಗೂ ನಗದು ಬಹುಮಾನ ಹಣ ಪಡೆದಿರುತ್ತಾರೆ.
ಎಂ.ಟೆಕ್ (ಪ್ರಥಮ ರ್ಯಾಂಕ್ ಹಾಗೂ ಗೋಲ್ಡ್ ಮೆಡಲ್ ಪ್ರಶಸ್ತಿ) :-
2013-14ನೇ ಸಾಲಿನಲ್ಲಿ ಸದರಿ ವಿದ್ಯಾರ್ಥಿಯು ಮೈಸೂರು ನಗರದ ಜೆ.ಎಸ್.ಎಸ್. ವಿದ್ಯಾಸಂಸ್ಥೆಯ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ (Autonomous) ಎಂ.ಟೆಕ್ (ಬಯೋ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಸಿಗ್ನಲ್ ಪ್ರೊಸೆಸಿಂಗ್ ಮತ್ತು ಇನ್ಸ್ಟ್ರುಮೆಂಟೇಶನ್) ಕೋರ್ಸಿನ ಪರೀಕ್ಷೆಯಲ್ಲಿ ಶೇ.98% ಪಡೆದು ಸದರಿ ಕಾಲೇಜಿಗೆ ಪ್ರಥಮ ರ್ಯಾಂಕ್ ಹಾಗೂ ಗೋಲ್ಡ್ ಮೆಡಲ್ ಪ್ರಶಸ್ತಿ ಪ್ರಧಾನ ಹೊಂದಿರುತ್ತಾನೆ. ಸದರಿ ಕಾಲೇಜು ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ / ಘಟಿಕೋತ್ಸವ ಸಮಾರಂಭದಲ್ಲಿ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ ಸುತ್ತೂರು ಮಠ ಮೈಸೂರು, ಶ್ರೀ ಎಂ.ಎನ್.ವೆಂಕಟಾಚಲಯ್ಯ ನಿವೃತ್ತ ಚೀಪ್ ಜಸ್ಟೀಸ್ ಆಫ್ ಇಂಡಿಯಾ ಸುಪ್ರಿಂ ಕೋರ್ಟ್ ಭಾರತ ಸರ್ಕಾರ ನವದೆಹಲಿ ಹಾಗು ಇನ್ನು ಮುಂತಾದ ಗಣ್ಯ ವ್ಯಕ್ತಿಗಳು ಸದರಿ ವಿದ್ಯಾರ್ಥಿಯು ಎಂ.ಟೆಕ್ ಕೋರ್ಸಿನ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರಿಂದ ಗೋಲ್ಡ್ ಮೆಡಲ್ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿರುತ್ತಾರೆ.
2015 ರಿಂದ ಸದರಿ ಸಿ.ಎಂ.ವಿಕ್ರಮ್ ವಿದ್ಯಾರ್ಥಿಯು ಅಸ್ಸಾಂ ರಾಜ್ಯದ ಗುವಾಹಟಿಯ ಐ.ಐ.ಟಿ (ಕೇಂದ್ರ ಸರ್ಕಾರದ ತಾಂತ್ರಿಕ ಮಹಾವಿದ್ಯಾ ಸಂಸ್ಥೆ) ಯಲ್ಲಿ ಪಿ.ಹೆಚ್‍ಡಿ (ರೀಸರ್ಚ್ ಸ್ಕಾಲರ್) ವ್ಯಾಸಂಗ ಮಾಡುತ್ತಿದ್ದಾನೆ. ಕೇಂದ್ರ ಸರ್ಕಾರದಿಂದ ಸದರಿ ವಿದ್ಯಾರ್ಥಿಗೆ ಮಾಸಿಕ 40,000 ರೂಪಾಯಿ ಸ್ಕಾಲರ್‍ಶಿಪ್ ಪಡೆಯುತ್ತಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ