ಸಿ.ಐ.ಟಿ ಕಾಲೇಜಿನಲ್ಲಿ ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

ಗುಬ್ಬಿ:

         ತುಮಕೂರಿನ ಪ್ರತಿಷ್ಠಿತ, ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2018-19ನೇ ಸಾಲಿನಲ್ಲಿ ವಿವಿದ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ಪ್ರವೇಶ ಪಡೆದ ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

          ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನವ ದೆಹಲಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ, ಇವರುಗಳ ಮಾರ್ಗದರ್ಶಿ ಸೂತ್ರಗಳ ಪ್ರಕಾರ 2018-19ನೇ ಶೈಕ್ಷಣಿಕ ವರ್ಷದಲ್ಲಿ ವಿವಿದ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ಪ್ರವೇಶ ಪಡೆದ ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ 3ವಾರಗಳ ಮಾರ್ಗದರ್ಶಿ (ಓರಿಯೆಂಟೇಶನ್) ಕಾರ್ಯಕ್ರಮವನ್ನು ಆಗಸ್ಟ 13, 2018ರಿಂದ ಹಮ್ಮಿಕೊಳ್ಳಲಾಗಿದೆ.

          ಈ ಓರಿಯೆಂಟೇಶನ್ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರು ಹಾಗು ಸಿ.ಎಸ್.ಇ ವಿಭಾಗದ ಮುಖ್ಯಸ್ಥರಾದ ಡಾ|| ಶಾಂತಲ ರವರು ಔಪಚಾರಿಕವಾಗಿ ಉದ್ಘಾಟಿಸಿದರು, ಈ ಉದ್ಘಾಟನಾ ಸಮಾರಂಭದಲ್ಲಿ ಸಿ.ಐ.ಟಿ ಕಾಲೇಜಿನ ಸಂಶೋಧನಾ ಮುಖ್ಯ ಸಲಹೆಗಾರರಾದ ಡಾ|| ಶ್ರೀಧರ್.ಕೆ.ಎನ್.ರಾವ್ ರವರು, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

          ಕಾಲೇಜಿನ ಉಪ-ಪ್ರಾಂಶುಪಾಲರು ಹಾಗು ಸಿ.ಎಸ್.ಇ ವಿಭಾಗದ ಮುಖ್ಯಸ್ಥರಾದ ಡಾ|| ಶಾಂತಲ ರವರು ಕಾಲೇಜಿನ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಿ, 17ವರ್ಷಗಳಲ್ಲಿ ಕಾಲೇಜು ನಡೆದು ಬಂದ ಹಾದಿಯನ್ನು ವಿವರಿಸುತ್ತ, ತಾಂತ್ರಕ ಕ್ಷೇತ್ರದಲ್ಲಿ ಸಿ,ಐ.ಟಿ. ಕಾಲೇಜು ಮಾಡಿರುವ ಸಾಧನೆಗಳನ್ನು ವಿವರಿಸಿದರು ಹಾಗೂ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಪರಿಸರವನ್ನು ಒದಗಿಸುವಲ್ಲಿ ಮಾಡಿರುವ ಉಪಕ್ರಮಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಐ.ಟಿ ಕಾಲೇಜಿನ ಸಂಶೋಧನಾ ಮುಖ್ಯ ಸಲಹೆಗಾರರಾದ ಡಾ|| ಶ್ರೀಧರ್.ಕೆ.ಎನ್.ರಾವ್ ರವರು, ಕಾಲೇಜು ವಿವಿಧ ವಷಯಗಳ ಕಲಿಕೆಯಲ್ಲಿ ವಿದ್ಯಾರ್ಥಿಗಳ ಕಲಿಕಾಶೈಲಿಯನ್ನು ಆಧರಿಸಿ ಮಾಡಬಹುದಾಗಿದೆ ಎಂದು ತಿಳಿಸುತ್ತಾ, ಈ ದಿಸೆಯಲ್ಲಿ ಸಿಐ.ಟಿ ಕಾಲೇಜು ತಂತ್ರಜ್ಞಾನದ ಮಧ್ಯಸ್ಥಿಕೆಯಲ್ಲಿ ಕಲಿಕೆಯ ಪರಿಸರವನ್ನು (ಟೆಕ್ನಾಲಜಿ ಮೀಡಿಯೇಟೆಡ್ ಲರ್ನಿಲ್ ಎನ್‍ವಾರ್ನಿಮೆಂಟ್) ಕಾರ್ಯರೂಪಕ್ಕೆತರಲು ಪ್ರಯತ್ನಗಳನ್ನು ವಿವರಿಸಿದರು.

          ಈ 3ವಾರಗಳ ಮಾರ್ಗದರ್ಶಿ (ಓರಿಯೆಂಟೇಶನ್) ಕಾರ್ಯಕ್ರಮ ಸಂಪೂರ್ಣವಾಗಿ ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳು ದೈಹಿಕ ಚಟುವಟಿಕೆ, ಸೃಜನಾತ್ಮಕ ಕಲೆಗಳು, ಸಾಹಿತ್ಯ, ಸಾರ್ವತ್ರಿಕ ಮಾನವಿಯ ಮೌಲ್ಯಗಳು ಮತ್ತು ಕುಶಲತೆಗೆ ಸಂಬಂಧಿಸಿದ ವಿವಿಧ ಮಾಡೆಲ್‍ಗಳಿಗೆ ಒರೆಅಚ್ಚಿ ಸಾಮಾಜಿಕ ಮತ್ತು ಇಂಜಿನಿಯರಿಂಗ್ ವೃತ್ತಿಪರತೆಯನ್ನು ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಕಾಲೇಜಿನ ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಡಾ|| ಸುರೇಶ್ ಡಿ.ಎಸ್ ರವರು ತಿಳಿಸಿದರು.
ಸಿ.ಐ.ಟಿ ಕಾಲೇಜಿನಲ್ಲಿ ವ್ಯಾಸಂಗದ ನಿರ್ದಾರ ಕೈಗೊಂಡು ಕಾಲೇಜಿನಲ್ಲಿ ಭರವಸೆ ಇರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಎಸ್. ಬಸವರಾಜ್ ರವರು ಹಾಗೂ ಕಾರ್ಯದರ್ಶಿಗಳಾದ ಶ್ರೀಯುತ ಜಿ.ಬಿ ಜ್ಯೋತಿಗಣೇಶ್‍ರವರು ಅಭಿನಂದಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap