ಚಳ್ಳಕೆರೆ
ಯಾವ ವ್ಯಕ್ತಿ ಸಮಾಜದಲ್ಲಿ ಎಲ್ಲಾ ಸಮೂಹಗಳ ವಿಶ್ವಾಸವನ್ನು ಗಳಿಸುತ್ತಾನೋ ಅಂತಹ ವ್ಯಕ್ತಿ ಮಾತ್ರ ಸುಲಭವಾಗಿ ಜನರ ಮನವನ್ನು ಗೆಲಲ್ಲು ಸಾಧ್ಯ. ಪ್ರತಿನಿತ್ಯವೂ ಸಹ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರವನ್ನು ರೂಪಿಸುವ ಶಕ್ತಿ ಮತ್ತು ಸಾಮಥ್ರ್ಯ ಇರುವವನ್ನು ಮಾತ್ರ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಸಾಧ್ಯ. ಈ ಕಾರ್ಯವನ್ನು ನಗರಸಭೆಗೆ ನೂತನವಾಗಿ ಆಯ್ಕೆಯಾದ ಜಿ.ಮಲ್ಲಿಕಾರ್ಜುನ್ ಉತ್ತಮವಾಗಿ ನಿರ್ವಹಿಸುವವರು ಎಂದು ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ತಿಳಿಸಿದರು.
ಅವರು ಗುರುವಾರ ಇಲ್ಲಿನ ಸೂಜಿಮಲ್ಲೇಶ್ವರ ನಗರದಲ್ಲಿ ಅಲ್ಲಿನ ಯುವಕ ಸಂಘ ಮತ್ತು ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇತ್ತೀಚಿಗೆ ತಾನೇ ಸೂಜಿಮಲ್ಲೇಶ್ವರ ನಗರದ 5ನೇ ವಾರ್ಡ್‍ನಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಜಿ.ಮಲ್ಲಿಕಾರ್ಜುನರವರನ್ನು ಸನ್ಮಾನಿಸಿ ಮಾತನಾಡಿದರು. ಜನತೆ ಎಂದಿಗೂ ಸಹ ತಮ್ಮ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ಜಿ.ಮಲ್ಲಿಕಾರ್ಜುನ್ ಕಳೆದ ಸುಮಾರು 10 ವರ್ಷಗಳಿಂದ ಈ ಭಾಗದ ಜನರ ಸಮಸ್ಯೆಗಳ ಪರವಾಗಿ ಚಿಂತನೆ ನಡೆಸಿದ್ಧಾರೆ. ಇವರ ಆಯ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹದ್ದಾಗಿದೆ ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನೂತನ ಸದಸ್ಯ ಜಿ.ಮಲ್ಲಿಕಾರ್ಜುನ್, ಕೆಲವುವರ್ಷಗಳಿಂದ ವಾರ್ಡ್ ನಂ.5ರ ಹಲವಾರು ಪ್ರಮುಖ ಯೋಜನೆಗಳಲ್ಲಿ ಕಾಮಗಾರಿಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಈ ಭಾಗದ ಜನರಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಪತ್ರಕರ್ತ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಇದೇ ಮೊದಲ ಬಾರಿಗೆ ರಾಜಕೀಯ ರಂಗ ಪ್ರವೇಶಿಸಿ ಜಿ.ಮಲ್ಲಿಕಾರ್ಜುನ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ಧಾರೆ. ಈ ಭಾಗದ ಹಲವಾರು ಸಮಸ್ಯೆಗಳಿಗೆ ನೂತನ ಸದಸ್ಯರು ಪರಿಹಾರವನ್ನು ದೊರಕಿಸಿಕೊಡುವ ಇಚ್ಚಾಶಕ್ತಿ ಹೊಂದಿದ್ದಾರೆಂದರು.
ಈ ಸಂದರ್ಭದಲ್ಲಿ ವಳ್ಳಿ ಪ್ರಕಾಶ್, ಎಂ.ಪಿ. ಶ್ರೀನಿವಾಸ್, ಬೇಕರಿ ವಿಜಯಣ್ಣ, ಗಾಡಿ ತಿಪ್ಪೇಸ್ವಾಮಿ, ಕೆ.ಎಂ. ಜಗದೀಶ್, ಯಂಕನಾಯ್ಕ, ರವಿಕುಮಾರ್, ವೆಂಕಟೇಶ್, ವೀರೇಶ್, ದುರುಗಪ್ಪ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
