ಬೆಂಗಳೂರು:
ಮಾಜಿ ಸಿಎಂ ಸಿದ್ದರಾಮಯ್ಯ ರವರು ಇಂದಿನಿಂದ ಹತ್ತು ದಿನಗಳ ಕಾಲ ತಮ್ಮ ಪುತ್ರ ಯತೀಂದ್ರ ಜೊತೆಯಲ್ಲಿ ಯುರೋಪ್ ರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ.
ಒಟ್ಟು ಹತ್ತು ದಿನಗಳ ಯುರೋಪ್ ಪ್ರವಾಸಕ್ಕೆ ಕೈಗೊಂಡಿರುವ ಸಿದ್ದರಾಮಯ್ಯ ರವರ ಜತೆ ಪುತ್ರ ಯತೀಂದ್ರ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸೇರಿದಂತೆ ಕುಟುಂಬದ ಸದಸ್ಯರು ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಸಿದ್ದರಾಮಯ್ಯ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ತೀವ್ರ ಗೊಂದಲ ಉಂಟಾಗಿತ್ತು, ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸಿದ್ದರಾಮಯ್ಯ ವಿದೇಶಕ್ಕೆ ತೆರಳುವ ವೇಳೆ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ನಿವಾಸದ ಎದುರು ನೆರೆದಿದ್ದರು.
ಇನ್ನು ಸದಾ ಬಿಳಿ ಪಂಚೆ, ಶರ್ಟ್ ಧರಿಸುವ ಸಿದ್ದರಾಮಯ್ಯ ಅವರು ಇಂದು ವಿದೇಶಕ್ಕೆ ತೆರಳುತ್ತಿರುವ ಕಾರಣಕ್ಕೆ ಬೂದು ಬಣ್ಣದ ಸೂಟ್ ಧರಿಸಿದ್ದು ವಿಶೇಷವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/siddu-urope-1.gif)