ಸೈಕೋ ಶರವಣನ್​ ಬಂಧನ…..!

ಚೆನ್ನೈ: 

      ಚೆನ್ನೈನ ಕುಕಪ್ಪೇರ್​ ಏರಿಯಾದ 22 ವರ್ಷದ ಸಂತ್ರಸ್ತ ಯುವತಿ ತಿರುಮಂಗಲಂ ಮಹಿಳಾ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಸೈಕೋ ಶರವಣನ್​ ಬಂಧನವಾಗಿದೆ.

     ಪೊಲೀಸರ ಪ್ರಕಾರ 2021ರಲ್ಲಿ ತಿರುಮಂಗಲಂ ಏರಿಯಾದಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಬೈಕ್​ ಮೇಲೆ ಬಂದು ಲೈಂಗಿಕ ದೌರ್ಜನ್ಯ ಎಸಗಿ ಶರವಣನ್ ಪರಾರಿಯಾಗಿದ್ದ.​ ಬಳಿಕ ಆತನ ಬಂಧನವಾಗಿತ್ತು. ಕಳೆದ ಮಾರ್ಚ್​ನಲ್ಲಿ ಬಿಡುಗಡೆಯಾಗಿದ್ದ. ಜೈಲು ಶಿಕ್ಷೆಯನ್ನು ಅನುಭವಿಸಿದರೂ ಸುಮ್ಮನಾಗದೇ ತನ್ನಮ ಕೃತ್ಯವನ್ನು ಮುಂದುವರಿಸಿದ್ದ.

     ಶರವಣನ್​ ವಿರುದ್ಧ ಅಣ್ಣಾ ನಗರ, ಜೆಜೆ ನಗರ, ತಿರುಮಂಗಲಂ, ಪೆರವಳ್ಳೂರು ಸೇರಿದಂತೆ ವಿವಿಧ ಏರಿಯಾಗಳ ಪೊಲೀಸ್​ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಸ್ತೆಯಲ್ಲಿ ಯಾವುದೇ ಯುವತಿ ಒಂಟಿಯಾಗಿ ಸಾಗುತ್ತಿದ್ದರೆ, ಈತ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅದರಲ್ಲೂ ಸುಂದರ ಹೆಂಗಸರು ಹಾಗೂ ಮಾಡ್ರನ್​ ಡ್ರೆಸ್ ತೊಟ್ಟ ಹೆಂಗಸರನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

    ಚೂಡಿದಾರ್​ ಧರಿಸಿ, ದುಪ್ಪಟ್ಟವನ್ನು ಹಾಕದೆ ರಸ್ತೆಗೆ ಇಳಿದರೆ ಅಂಥವರೇ ಈತನ ಟಾರ್ಗೆಟ್​ ಆಗಿತ್ತು. ಲೈಂಗಿಕ ಕಿರುಕುಳ ನೀಡುವುದೇ ಈತಹ ಹವ್ಯಾಸ ಆಗಿತ್ತು. ಪ್ರತಿದಿನ ಕನಿಷ್ಠ 5 ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಇಲ್ಲಿಯವರೆಗೆ 100ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

      ಆರೋಪಿ ಸರವಣನ್ ಮುಕ್ಕಪೇರು ಪ್ರದೇಶದಲ್ಲಿ ವಾಸವಾಗಿದ್ದಾನೆ. ಅವನಿಗೆ ಖಾಯಂ ಕೆಲಸ ಇರಲಿಲ್ಲ. ಆ ಪ್ರದೇಶದಲ್ಲಿ ಸಿಗುವ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹಣ ಸಂಪಾದಿಸುತ್ತಿದ್ದ. ಬಂದ ಹಣದಲ್ಲಿ ಬೈಕ್​ ಅನ್ನು ಬಾಡಿಗೆ ಪಡೆಯುತ್ತಿದ್ದ. ತಿರುಮಂಗಲಂ, ಮುಕಪೇರು, ಜೆಜೆ ನಗರ ಮತ್ತು ನೊಲಂಪುರ್​ ಏರಿಯಾಗಳಲ್ಲಿ ಸುತ್ತಾಡುತ್ತಾ ರಸ್ತೆಗಳಲ್ಲಿ ಸಿಕ್ಕ ಯುವತಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ.

     ಮಹಿಳೆಯರು ಅಥವಾ ಯುವತಿಯರ ಬಳಿ ವಿಳಾಸ ಕೇಳುವ ನೆಪದಲ್ಲಿ ಹೋಗುತ್ತಿದ್ದ. ದಿಢೀರನೇ ಮಹಿಳೆಯರನ್ನು ತಬ್ಬಿಕೊಂಡು ಚುಂಬಿಸುತ್ತಿದ್ದ ಮತ್ತು ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ. ಬಳಿಕ ಘಟನೆ ಸಂಬಂಧ ಆಯಾ ಪ್ರದೇಶಗಳ ಪೊಲೀಸರಿಗೆ ದೂರುಗಳು ಬಂದಿವೆ. ಇದೀಗ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶರವಣನ್ ಎಂಬಾತನೇ ಲೈಂಗಿಕ ಕಿರುಕುಳ ಎಸಗಿರುವುದು ದೃಢಪಟ್ಟ ಬಳಿಕ ಬಂಧಿಸಿದ್ದಾರೆ.

    ಅವರು ಸಿಸಿಟಿವಿಯಲ್ಲಿ ಶರವಣನನ್ನು ಪೊಲೀಸರು ಗುರುತಿಸಿದ್ದರು. ಆದರೆ, ಶರವಣನ್ ಎಲ್ಲಿದ್ದಾನೆ ಎಂದು ಪತ್ತೆಯಾಗಿರಲಿಲ್ಲ. ಹೀಗಾಗಿ ಜೆಜೆ ನಗರ ಪೊಲೀಸರು ವಿಶೇಷ ಪಡೆ ರಚಿಸಿ ಶರವಣನಿಗಾಗಿ ಶೋಧ ನಡೆಸಿದರು. ಅಷ್ಟರಲ್ಲಾಗಲೇ ಆತ ಮುಕಾಬರ್‌ನಲ್ಲಿ ಅವಿತಿರುವ ಮಾಹಿತಿ ಸಿಕ್ಕಿ, ಅಲ್ಲಿಗೆ ತೆರಳಿ ಸೈಕೋ ಶರವಣನನ್ನು ಸುತ್ತುವರಿದು ಬಂಧಿಸಿದ್ದಾರೆ.

    ನಂತರವೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಪೊಲೀಸರು ಬೆನ್ನಟ್ಟಿ ಹೋದಾಗ ರಸ್ತೆಬದಿಯಲ್ಲಿದ್ದ ಮಳೆ ನೀರು ಚರಂಡಿಯ ತೋಡಿಗೆ ಬಿದ್ದು ಕೈ ಮುರಿದುಕೊಂಡಿದ್ದ. ಹೀಗಾಗಿ ಶರವಣನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಸೈಕೋ ಶರವಣನ ಬಂಧನದಿಂದ ಮಹಿಳೆಯರು ನಿಟ್ಟುಸಿರು ಬಿಡುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap