ಸೈಮಾ 2023 : ಪ್ರಶಸ್ತಿ ಗಳಿಕೆಯಲ್ಲಿ ಕರ್ನಾಟಕದವರ ಸಾಧನೆ ನೋಡಿ….!

ಬೆಂಗಳೂರು : 

    ಸೈಮಾ 2023 ಪ್ರಶಸ್ತಿ ಪ್ರದಾನ ಸಮಾರಂಭ 2 ದಿನಗಳಿಂದ ದುಬೈನಲ್ಲಿ ನಡೀತಿದೆ. ರಂಗುರಂಗಿನ ಕಾರ್ಯಕ್ರಮದಲ್ಲಿ ಕಳೆದ ವರ್ಷ ಬಿಡುಗಡೆಯಾ ದಕ್ಷಿಣ ಭಾರತ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ. ನಿನ್ನೆ(ಸೆಪ್ಟೆಂಬರ್ 15) ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು.

    ಕಲರ್‌ಫುಲ್ ಶೋನಲ್ಲಿ ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ ಸಿನಿತಾರೆಯರು ಭಾಗಿಯಾಗಿ ರಂಗೇಸಿದರು. ವಿಜೇತರು ಪ್ರಶಸ್ತಿಗೆ ಮುತ್ತಿಟ್ಟು ಸಂಭ್ರಮಿಸಿದ್ದರು. ಆಯಾ ಭಾಷೆಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ಅತ್ಯುತ್ತಮ ನಟನೆ, ಗಾಯನ, ಸಂಗೀತ ನಿರ್ದೇಶನ ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು. ಸೈಮಾ 2023ರಲ್ಲಿ ಕನ್ನಡ ಸಿನಿಮಾಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.

     ತಿಂಗಳ ಹಿಂದೆಯೇ ಸೈಮಾ ಪ್ರಶಸ್ತಿಗಳಿಗೆ ಆಯಾ ಭಾಷೆಯ ನಾಮಿನೇಷನ್ ಲಿಸ್ಟ್ ಹೊರಬಿದ್ದಿತ್ತು. ಕಳೆದ ಬಾರಿ ಬೆಂಗಳೂರಿನಲ್ಲಿ ಸೈಮಾ ಈವೆಂಟ್ ನಡೆದಿತ್ತು. ಈ ಬಾರಿ ಮತ್ತೊಮ್ಮೆ ದುಬೈನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು ವಿಶೇಷ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್, ಜ್ಯೂ.ಎನ್‌ಟಿಆರ್, ಶ್ರೀಲೀಲಾ ಸೇರಿದಂತೆ ಕನ್ನಡ, ತೆಲುಗಿನ ತಾರೆಯರು ಸೈಮಾ ವೇದಿಕೆಯಲ್ಲಿ ಕಾಣಿಸಿಕೊಂಡರು. ರಂಗುರಂಗಿನ ಡ್ಯಾನ್ಸ್ ಪರ್ಫಾರ್ಮನ್ಸ್‌ಗಳು ಶೋ ರಂಗೇರಿಸಿತು.

ಸೈಮಾ 2023 ಕನ್ನಡ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ.

ಅಚ್ಯುತ್‌ ಕುಮಾರ್- ಅತ್ಯುತ್ತಮ ಖಳನಟ(ಕಾಂತಾರ),ಯಶ್- ಅತ್ಯುತ್ತಮ ನಟ(KGF-2),ರಿಷಬ್ ಶೆಟ್ಟಿ- ಅತ್ಯುತ್ತಮ ನಟ(ಕ್ರಿಟಿಕ್ಸ್) ಕಾಂತಾರ,ಭುವನ್ ಗೌಡ- ಅತ್ಯುತ್ತಮ ಛಾಯಾಗ್ರಾಹಕ(KGF-2),ಪರಂವಃ- ರಕ್ಷಿತ್‌ ಶೆಟ್ಟಿ- ಅತ್ಯುತ್ತಮ ಸಿನಿಮಾ (777 ಚಾರ್ಲಿ),ಪೃಥ್ವಿ ಶಾಮನೂರು- ಅತ್ಯುತ್ತಮ ಉದಯೋನ್ಮುಖ ನಟ(ಪದವಿಪೂರ್ವ),ಪವನ್ ಒಡೆಯರ್- ಅತ್ಯುತ್ತಮ ಚೊಚ್ಚಲ ನಿರ್ಮಾಣ(ಡೊಳ್ಳು),ದಿಗಂತ್- ಅತ್ಯುತ್ತಮ ಪೋಷಕ ನಟ(ಗಾಳಿಪಟ),,ಕಿರಣ್‌ ರಾಜ್- ಅತ್ಯುತ್ತಮ ನಿರ್ದೇಶಕ(777 ಚಾರ್ಲಿ),ಅಜನೀಶ್ ಲೋಕನಾಥ್- ಅತ್ಯುತ್ತಮ ಸಂಗೀತ(ಕಾಂತಾರ),ಸಪ್ತಮಿ ಗೌಡ- ಅತ್ಯುತ್ತಮ ನಟಿ(ಕ್ರಿಟಿಕ್ಸ್) ಕಾಂತಾರ,ಶುಭರಕ್ಷಾ – ಅತ್ಯುತ್ತಮ ಪೋಷಕ ನಟಿ (ಹೋಮ್‌ ಮಿನಿಸ್ಟರ್),ಶ್ರೀನಿಧಿ ಶೆಟ್ಟಿ- ಅತ್ಯುತ್ತಮ ನಟಿ(KGF-2),ವಿಜಯ್​ ಪ್ರಕಾಶ್- ಅತ್ಯುತ್ತಮ ಗಾಯಕ(ಸಿಂಗಾರ ಸಿರಿಯೇ),ಸುನಿಧಿ ಚೌಹಾಣ್​- ಅತ್ಯುತ್ತಮ ಗಾಯಕಿ (ರಾರಾ ರಕ್ಕಮ್ಮ),ಪ್ರಕಾಶ್​ ತುಮ್ಮಿನಾಡು- ಅತ್ಯುತ್ತಮ ಹಾಸ್ಯನಟ (ಕಾಂತಾರ),ರಕ್ಷಿತ್​ ಶೆಟ್ಟಿ: ಅತ್ಯುತ್ತಮ ನಟ (ವಿಶೇಷ ಮೆಚ್ಚುಗೆ ಪ್ರಶಸ್ತಿ)777 ಚಾರ್ಲಿ,  ನೀತಾ ಅಶೋಕ್​: ಅತ್ಯುತ್ತಮ ಹೊಸ ನಟಿ (ವಿಕ್ರಾಂತ್​ ರೋಣ),ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಚ್ಯುತ್‌ ಕುಮಾರ್, ಸಪ್ತಮಿ ಗೌಡ ಸೇರಿದಂತೆ ಹಲವರು ದುಬೈನಲ್ಲಿ ನಡೆದ ಸೈಮಾ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಸ್ವೀಕರಿಸಿದರು.

     ಯಶ್ ಸೇರಿದಂತೆ ಹಲವರು ಭಾಗಿ ಆಗಲು ಸಾಧ್ಯವಾಗಲಿಲ್ಲ. ಇನ್ನು ತಾರೆಯರು ತಮ್ಮ ಕಲರ್‌ಫುಲ್‌ ಔಟ್‌ಫಿಟ್‌ಗಳಿಂದ ಎಲ್ಲರ ಹುಬ್ಬೇರಿಸಿದರು. ರಕ್ಷಿತ್ ಶೆಟ್ಟಿ, ದಿಗಂತ್ ಸೂಟ್‌ನಲ್ಲಿ ಮಿಂಚಿದ್ರೆ ರಿಷಬ್ ಕಪ್ಪು ಬಣ್ಣದ ಶೇರ್ವಾನಿಯಲ್ಲಿ ಕಾಣಿಸಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link