ಬೆಂಗಳೂರು:
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರ ನನ್ನನ್ನು ವಿಷಸರ್ಪ ಎಂದ ಕುಮಾಸ್ವಾಮಿಗೆ ಅದು ಗೊತ್ತಿಲ್ಲವೆ ಎಂದು ತೀರ್ವ ವಾಗ್ದಾಳಿ ನಡೆಸಿದ್ದಾರೆ.
ನಾವೆಲ್ಲರೂ ಸಹ ಜನರ ತೀರ್ಪನ್ನು ಸ್ವೀಕಾರ ಮಾಡಲೇಬೇಕು ಎಂದರು. ಇನ್ನು ಕುಮಾರಸ್ವಾಮಿ ಅವರು ಆಡದ ಭಾಷೆ ಅವರು ಕಲಿತ ಸಂಸ್ಕೃತಿ ತೋರಿಸುತ್ತದೆ. ಚುನಾವಣೆಯಲ್ಲಿ ನಾನು ಸೋತ್ತಿದ್ದೇನೆ. ಯಾಕೆ ಕುಮಾರಸ್ವಾಮಿ ಸೋತಿಲ್ವಾ, ಅವರಪ್ಪ ಸೋತಿಲ್ಲಾ, ಮಗ ಸೋತಿಲ್ವಾ ಎಂದು ತಿರುಗೇಟು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ