ಸೋಸೈಟಿಯಲ್ಲಿ ಹೂಡಿದ್ದ ಹಣ ಕೊಡಿಸಲು ಮನವಿ

ಚಿತ್ರದುರ್ಗ

       ನಗರದ ಬಸವೇಶ್ವರ ಚಿತ್ರಮಂದಿರದ ಬಳಿ ಖಾಸಗಿ ಅಲ್ಪಸಂಖ್ಯಾತರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣ ತೊಡಗಿಸಿದ್ದ ಸುಮಾರು 900 ಜನರು ಇದೀಗ ಸೊಸೈಟಿ ಮುಚ್ಚಿರುವುದರಿಂದ ಆತಂಕಗೊಂಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಹಣ ಕೊಡಿಸುವಂತೆ ಬೇಡಿಕೊಂಡರು.

        ಕಳೆದ 15 ವರ್ಷಗಳಿಂದ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ನಡೆಸಲಾಗುತ್ತಿದೆ. ಇದೊಂದು ನೊಂದಣಿಯಾಗಿರುವ ಸೊಸೈಟಿ. ಈ ಸೊಸೈಟಿಯಲ್ಲಿ ಹಣ ಪಾವತಿಸಿರುವರು ಬಹುತೇಕರು ಬಡವರು. ಅದರಲ್ಲಿಯೂ ಕೂಲಿ ಕೆಲಸ, ಹಣ್ಣು ವ್ಯಾಪಾರ, ಬೀದಿ ವ್ಯಾಪಾರ ಮಾಡುವವರೇ ಹೆಚ್ಚು. ಈ ಸೊಸೈಟಿಗೆ ಪಿಗ್ಮಿ ಮೂಲಕ ನಿತ್ಯ ಉಳಿತಾಯ ಮಾಡಿದ ಹಣವನ್ನು ಬಡವರು ಕಟ್ಟಿಕೊಂಡು ಬಂದಿದ್ದಾರೆ. ಪಿಗ್ಮಿ ಮೂಲಕ ಹಣ ಪಾವತಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಹಣವನ್ನು ಠೇವಣೆ ಇಡುವುದು. ಬಡ್ಡಿ ಹೆಚ್ಚಾಗಿ ಸಿಗಲಿದೆ ಎಂಬ ಕಾರಣಕ್ಕಾಗಿ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿ 2017 ರಿಂದಲೂ ಹಣ ಪಾವತಿಸುತ್ತಾ ಬಂದಿದ್ದಾರೆ.

         ಸೊಸೈಟಿಯಲ್ಲಿ ಹಣದ ಹೊಳೆಯೇ ಹರಿದಿದೆ. ಬಡವರು ಹಣ ಸುರಕ್ಷಿತವಾಗಿದೆ. ಮುಂದಿನ ದಿನಗಳಲ್ಲಿ ಬರುವ ರಂಜಾನ್ ಹಬ್ಬಕ್ಕೆ ಹಣ ಬಿಡಿಸಿಕೊಂಡು ಮಕ್ಕಳಿಗೆ ಬಟ್ಟೆ ಕೊಡಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಬೇಕೆಂಬ ಕನಸು ಕಂಡಿದ್ದರು. ಆ ಕನಸು ನನಸು ಆಗಲಿಲ್ಲ. ಬದಲಿಗೆ ಬಡವರ ಕನಸು ನುಚ್ಚು ನೂರಾಗಿದೆ. ಪಿಗ್ಮಿ ಸಂಗ್ರಹಗಾರನಿಗೆ ಸೊಸೈಟಿ ಆಡಳಿತದಲ್ಲಿ ನಡೆಯುತ್ತಿದ್ದ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಏಕೋ ಬಡವರ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗಿರುವ ಬಗ್ಗೆ ಗುಮಾನಿ ಬಂದಿದೆ. ತಕ್ಷಣ ಆತ ಸೊಸೈಟಿಯಲ್ಲಿ ಎರಡು ತಿಂಗಳ ರಜೆ ಕೇಳಿದ್ದಾನೆ. ಹಣ ನಿತ್ಯ ಬರುತ್ತಿದ್ದರಿಂದ ರಜೆ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

       ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸುವ ಸಲುವಾಗಿ ಪಿಗ್ಮಿಸಂಗ್ರಹಗಾರ ಹಣ ಪಾವತಿಸಿದವರ ಬಳಿಗೆ ಹೋಗಿ ನಿಮ್ಮ ಹಣದಲ್ಲಿ ಸೊಸೈಟಿ ಆಸ್ತಿ ಮಾಡಿಕೊಳ್ಳಲಾಗುತ್ತಿದೆ. ನಿಮ್ಮ ಹಣ ನೀವು ಮೊದಲು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಜನರು ಸೊಸೈಟಿಗೆ ಹೋದಾಗ ಅದರ ಬಾಗಿಲು ಮುಚ್ಚಿತ್ತು. ಇದರಿಂದ ಕಂಗಲಾದ ಜನರು ಜಿಲ್ಲಾ ರಕ್ಷಣಾಧಿಕಾರಿಯನ್ನು ಭೇಟಿ ಮಾಡಿದಾಗ ಚುನಾವಣೆ ಬಳಿಕ ಬರುವಂತೆ ಹೇಳಿದ್ದಾರೆನ್ನಲಾಗಿದೆ.

      ಲೋಕಸಭೆ ಚುನಾವಣೆ ಮುಗಿದರೂ ಸೊಸೈಟಿ ಬಾಗಿಲು ತೆರೆಯಲಿಲ್ಲ. ಇದರಿಂದ ಆತಂಕಗೊಂಡ ಜನರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಹಣ ಕೊಡಿಸುವಂತೆ ಮೌಖಿಕವಾಗಿ ಮನವಿ ಮಾಡಿದರು. ಮೊದಲು ಲಿಖಿತವಾಗಿ ದೂರು ನೀಡುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ ನೀಡಿದ ಮೇರೆಗೆ ಲಿಖಿತವಾಗಿ ದೂರು ನೀಡಲಾಗಿದೆ. ಈಗಾಗಲೆ ಎಸ್ಪಿ ಅವರಿಗೆ ಮೌಖಿಕವಾಗಿ ದೂರು ಸಲ್ಲಿಕೆಯಾಗಿದ್ದು ಸೊಟೈಟಿ ಸಂಸ್ಥಾಪಕರು ಮೇ 10 ರೊಳಗೆ ಜನರ ಹಣ ವಾಪಾಸ್ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link