ಇಸ್ಲಾಮಾಬಾದ್: 

ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಅಭಿವೃದ್ಧಿಯ ಕಾರಣದಿಂದ ಜಗತ್ತಿನ ಅತ್ಯಂತ ಶ್ರೀಮಂತ ಮುಸ್ಲಿಮ್ ರಾಷ್ಟ್ರಗಳಾದ ಸೌದಿ ಮತ್ತು ಯು ಎ ಇ ಗಳಿಗೆ ಹೊರಡಲು ನಿರ್ಧರಿಸಿದ್ದಾರೆ. ತಮ್ಮ ಮೊದಲ ವಿದೇಶಿ ಪ್ರವಾಸಕ್ಕೆ ಸೌದಿ ಅರೇಬಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದ್ದು, ಸೆ.18 ರಿಂದ ಇಮ್ರಾನ್ ಖಾನ್ 2 ದಿನಗಳ ಸೌದಿ ಪ್ರವಾಸ ಆರಂಭಿಸಲಿದ್ದು ಈ ವೇಳೆ ಅವರು ಸೌದಿ ದೊರೆ ಸಲ್ಮಾನ್ ಬಿನ್ ಅಬುಲಾಜಿಜ್ ಮತ್ತು ದೊರೆ ಮೊಹಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.ರಿಯಾದ್ ನಲ್ಲಿ ಉಭಯ ನಾಯಕರು ಪರಸ್ಪರ ಭೇಟಿಯಾಗುವ ಸಾಧ್ಯತೆ ಇದ್ದು, ಈ ವೇಳೆ ಹಲವು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಪಾಕ್ ವಿದೇಶಾಂಗ ಸಚಿವರು, ವಿತ್ತ ಸಚಿವಾಲಯದ ಸಲಹೆಗಾರರು ತೆರಳಲಿದ್ದು, ಸೌದಿ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸೌದಿ ಅರೇಬಿಯಾ ಬಳಿಕ ಇಮ್ರಾನ್ ಖಾನ್ ಸೆ.19ರಂದು ಯುಎಇಗೆ ತೆರಳಲಿದ್ದು ಅಲ್ಲಿ ಕಿಂಗ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
