ಸೌಹಾರ್ದತೆ ಬದುಕಿಗೆ ಹರಪನಹಳ್ಳಿ ಮಾದರಿ

 

ಹರಪನಹಳ್ಳಿ:

ಗಣೇಶ ಚತುರ್ಥಿ ಹಾಗೂ ಮೊಹರಂ ನಿಮಿತ್ತ ಪಟ್ಟಣ ಡಿವೈಎಸ್.ಪಿ ಕಚೇರಿ ಆವರಣದಲ್ಲಿ ಗುರುವಾರ ಸಂಜೆ ಶಾಂತಿಸಭೆ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗೇಶ್ ಐತಾಳ, ಶಾಂತಿಯ ನೆಲೆಬೀಡು ಎನಿಸಿಕೊಂಡಿರುವ ಹರಪನಹಳ್ಳಿ ಸೌಹಾರ್ದತೆ ಬದುಕಿಗೆ ಮಾದರಿ ಆಗಿದೆ. ಗಣೇಶ್ ಚತುರ್ಥಿಯ ವೇಳೆ ದೇವರ ಗೀತೆಗಳು ಬಳಸಬೇಕು. ಪ್ರತಿಷ್ಠಾಪನೆ ಸ್ಥಳದಲ್ಲಿ ಅವಘಡಗಳು ನಡೆಯದಂತೆ ಎಚ್ಚರ ವಹಿಸಬೇಕು. ಕರ್ಕಸ ಧ್ವನಿಗಳನ್ನು ಬಳಸುವ ಮೂಲಕ ಅನ್ಯಧರ್ಮಿಯರಿಗೆ ತೊಂದರೆ ಆಗದಂತೆ ಮೆರವಣಿಗೆಯಲ್ಲಿ ಸಿಡಿಮದ್ದು, ಡಿಜೆ ಬಳಕೆ ಮಿತಿಯಲ್ಲಿರಬೇಕು. ದಿನನಿತ್ಯದ ಕಾರ್ಯಕ್ರಮಗಳ ವಿವರಗಳನ್ನು ಮಾಹಿತಿ ನೀಡಬೇಕು ಎಂದರು.
ಗಣಪತಿ ಪ್ರತಿಷ್ಠಾಪಣೆ ಮಂಡಳಿಯವರು ಸ್ವಯಂಸೇವಕರನ್ನು ನೇಮಿಸಿ ಅವರಿಗೆ ಸಮವಸ್ತ್ರ ನೀಡಬೇಕು. ಮೆರವಣಿಗೆ ವೇಳೆ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಬೇಕು. ಮಾರ್ಗಸೂಚಿಯಂತೆ ಮೆರವಣಿಗೆ ಸಾಗಬೇಕು. ಅಹಿತರ ಘಟನೆಗಳಿಗೆ ಅವಾಕಶ ನೀಡದೇ ಶಾಂತಿಯುತ ಹಬ್ಬದ ಆಚರಿಸಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ ಡಾ.ಮಧು ಮಾತನಾಡಿ, ವಿವಿಧೆತೆಯಲ್ಲಿ ಏಕತೆಯ ಮಂತ್ರ ನಮ್ಮದಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ನಮ್ಮ ನಾಡಿನಲ್ಲಿ ಹಬ್ಬಗಳಿಗೆ ವಿಶಿಷ್ಟ ಸ್ಥಾನವಿದೆ. ಪೊಲೀಸ್, ತಾಲ್ಲೂಕು ಆಡಳಿತಕ್ಕೆ ನಿಮ್ಮ ಸಹಕಾರ ತುಂಬಾ ಅಗತ್ಯವಾಗಿದೆ ಎಂದರು.
ಸಿಪಿಐ ಡಿ.ದುರಗಪ್ಪ ಮಾತನಾಡಿ, ಗಣಪತಿ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಯವರು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ಭಜರಂಗದಳದ ಹಿಂದೂ ಮಹಾಗಣಪತಿಯವರು ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು.ಇದರಿಂದ ಪೆÇಲೀಸ್ ಇಲಾಖೆ ಅನುಕೂಲಕವಾಗುತ್ತೆ. ಸೂರ್ಯಾಸ್ತದ ಒಳಗೆ ಗಣಪತಿ ವಿಸರ್ಜನೆ ಮಾಡುಬೇಕು ಎಂದು ಸಲಹೆ ನೀಡಿದರು.
ಭಜರಂಗದಳದ ಮುಖಂಡ ನಿಟ್ಟೂರು ಹನುಮಂತ ಮಾತನಾಡಿ, ಎಲ್ಲರೂ ಸೇರಿ ಆಚರಿಸುವ ಹಬ್ಬ ಗಣೇಶ ಚತುರ್ಥಿ. ಎಲ್ಲ ಧರ್ಮದವರೂ ಸೌಹರ್ದತೆಯಿಂದ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಭಾಗವಹಿಸಿ ಪರಸ್ಪರ ಸಹಕಾರ ನೀಡಿದರೆ, ಶಾಂತಿಸಭೆಗಳು ನಡೆಯುವ ಅಗತ್ಯತೆ ಇರುವುದಿಲ್ಲ ಎಂದು ಹೇಳಿದರು.

]ವಕೀಲ ಡಿ.ರೆಹಮಾನ್ ಸಾಬ್ ಮಾತನಾಡಿ, ಹರಪನಹಳ್ಳಿಗೆ ಐತಿಹಾಸಿಕ ಹಿನ್ನೆಲೆಯಿದೆ. ಹಿಂದಿನ ಕಾಲದಿಂದಲ್ಲೂ ಹಬ್ಬಗಳನ್ನು ಎಲ್ಲ ಸಮಾಜದ ಬಾಂಧವರು ಸೇರಿ ಆಚರಿಸುತ್ತಾ ಬರಲಾಗಿದೆ. ಗಣೇಶ್ ಹಬ್ಬಕ್ಕೆ ನಮ್ಮೇಲ್ಲರ ಸಹಕಾರವಿದೆ ಎಂದು ಹೇಳಿದರು.
ಪಿಎಸ್‍ಐ ಉಮೇಶಕುಮಾರ, ಪುರಸಭೆ ಅಧಿಕಾರಿ ಪ್ರಭು, ಕೆಎಬಿ ಅಧಿಕಾರಿ ಭೀಮಪ್ಪ ಮಾತನಾಡಿದರು. ಅಬಕಾರಿ ಇಲಾಖೆಯ ಸಾವಿತ್ರಿ ದೇವಜ್ಞ, ಅಗ್ನಿಶಾಮಕ ದಳದ ನಾಗರಾಜ, ಅಂಜುಮನ್ ಅಧ್ಯಕ್ಷ ಜಾವೇದ್, ನಾಲಬಂದ್ ಮಾಬೂಬಸಾಬ್, ಪೂಜಾರ ಮಂಜುನಾಥ್, ಹಿಂದೂಸ್ಥಾನಿ ಹಾಲೇಶ್, ಕಡೆಮನೆ ಸಂಗಮೇಶ್, ಮಲ್ಲೇಶ್, ಎಂ.ಮೆಹಬೂಬ್ ಸಾಬ್, ವೀರೇಶ್ ಹಿಂದೂಸ್ಥಾನಿ, ಅಶೋಕ, ಗಂಗಪ್ಪ, ಎಚ್.ಶಿವು ಸೇರಿದಂತೆ ವಿವಿಧ ಸಂಘಗಳ ಸದಸ್ಯರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link