ದಿನಾಂಕ: 20-08-2018 ರಂದು ನಮ್ಮ ಕಾಲೇಜಿನಲ್ಲಿ ಸ್ಕೌಟ್ಸ್ & ಗೈಡ್ಸ್, ಯುವ ರೆಡ್ ಕ್ರಾಸ್ ಘಟಕ ವತಿಯಿಂದ ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ & ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸದ್ಭಾವನಾ ನುಡಿಗಳನ್ನಾಡುತ್ತಾ ಸಿ.ಎಂ.ಕೃಷ್ಣಮೂರ್ತಿ, ಸಹಪ್ರಾಧ್ಯಾಪಕರು, ಇತಿಹಾಸ ವಿಭಾಗ ಇವರು ರಾಜೀವ್ ಗಾಂಧಿಯವರ ಹತ್ಯೆಯಾದ ದಿನವನ್ನು ಸ್ಮರಿಸಿ ಅವರ ಸಾಧನೆಯನ್ನು ಕುರಿತು, ನಮ್ಮ ದೇಶದ ಎಲ್ಲಾ ಜಾತಿ, ಧರ್ಮ, ಮತ, ಸೌಹಾರ್ಧತೆಯನ್ನು ಕುರಿತು ವಿದ್ಯಾರ್ಥಿಗಳಲ್ಲಿ ಶಾಂತಿ ಮತ್ತು ಸದ್ಭಾವನೆಯನ್ನು ಮೂಡಿಸುವ ಬಗ್ಗೆ ಹಿತವಚನ ನುಡಿದರು. ನಮ್ಮ ದೇಶದ ಇಂದಿನ ಸಮಸ್ಯೆಗಳನ್ನು, ಪರಿಸರ, ಪರಿಸರ ಅಸಮತೋಲನ ಎಂಬ ಇತ್ಯಾದಿ ವಿಷಯಗಳನ್ನು ಸಾಂಧರ್ಭಿಕವಾಗಿ ನುಡಿದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಮೂಡುವಲ್ಲಿ ಉತ್ತೇಜನ ನೀಡಿದರು.
ಶ್ರೀಮತಿ ಚೈತ್ರ ಸಿ., ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಇವರು ಸದ್ಭಾವನಾ ದಿವಸದ ಮಹತ್ವ ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿಗಳಾದ ಶ್ರೀ ರಾಜೀವ್ ಗಾಂಧಿ ಇವರ ಹತ್ಯೆಯಾದ ದಿನವನ್ನು ಸದ್ಭಾವನಾ ದಿನವನ್ನಾಗಿ ಆಚರಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗೂ ರಾಜೀವ್ ಗಾಂಧಿಯವರ ರಾಷ್ಟ್ರ ಪ್ರಗತಿ ಪರ ಆಡಳಿತ ಕಾರ್ಯಕ್ರಮಗಳನ್ನು ಈ ಸಂಧರ್ಭದಲ್ಲಿ ಸ್ಮರಿಸುತ್ತಾ ಪ್ರಾಸ್ತಾವಿಕ ನುಡಿಯನ್ನಾಡಿದರು.
ಕುಮಾರಿ ನಾಗರತ್ನ, ತೃತೀಯ ಬಿ.ಎ. ವಿದ್ಯಾರ್ಥಿನಿ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಚಂದ್ರಿಕಾ ಹೆಚ್. ಆರ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಘಟಕಗಳ ಕಾರ್ಯಕ್ರಮಾಧಿಕಾರಿಗಳು, ಉಪನ್ಯಾಸಕರು & ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಂದನಾರ್ಪಣೆಯನ್ನು ಶ್ರೀ ವೆಂಕಟೇಶ ಜಿ.ಬಿ ಇವರು ನಡೆಸಿಕೊಟ್ಟರು.