ಸ್ವಾತಂತ್ರ್ಯವೆಂದರೆ ಜವಾಬ್ದಾರಿ ಅರಿತು ಬಾಳುವುದು : ತಹಸೀಲ್ದಾರ್

ಕೊರಟಗೆರೆ

            ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸ್ವಾತಂತ್ರ್ಯವೆಂದರೆ ಪರಕೀಯರ ಅನುಕರಣೆಯಲ್ಲ. ಹಿಂದಿನ ಸ್ವಾತಂತ್ರ್ಯಕ್ಕಾಗಿ ಹೋರಾಟಗಳನ್ನು ಮಾಡಿದ ಮಹನೀಯರನ್ನು ನೆನೆಯುತ್ತಾ, ನಾಳೆಯ ಜವಾಬ್ದಾರಿಯನ್ನು ಅರಿಯುವುದೇ ನಿಜವಾದ ಸ್ವಾತಂತ್ರ್ಯದ ಪರಿಭಾಷೆ ಎಂದು ತಹಸೀಲ್ದಾರ್ ಎಂ.ನಾಗರಾಜು ತಿಳಿಸಿದರು.

            ಕೊರಟಗೆರೆ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವ್ವಜಾರೋಹಣ ಮಾಡಿ ಅವರು ಮಾತನಾಡಿದರು.

           ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರಬಹುದು. ಆದರೆ ಕೃಷಿಕ ವರ್ಗದ ಘನತೆ ಹೆಚ್ಚಿಸಿದಾಗ, ದೇಶ ರಕ್ಷಣೆಯ ಸೈನಿಕರಿಗೆ ಸೂಕ್ತ ಗೌರವ ಸಿಕ್ಕಾಗ, ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ದೊರೆತಾಗ, ಪ್ರತಿಯೊಬ್ಬ ಪ್ರತಿಭಾವಂತರಿಗೆ ಸರಿಯಾದ ಅವಕಾಶ ದೊರೆತಾಗ ಅದು ನಿಜವಾದ ಸ್ವಾತಂತ್ರ್ಯ. ಶಿಕ್ಷಣದಿಂದ ವಂಚಿತರಾಗಿರುವವರು ಬಹಳಷ್ಟು ಮಂದಿ ಇನ್ನು ನಮ್ಮ ದೇಶದಲ್ಲಿದ್ದಾರೆ. ಅಹಿಂಸೆ, ಶಾಂತಿ, ಸಹನೆ, ಭ್ರ್ರಾತೃತ್ವ, ಭಾವೈಕ್ಯತೆ, ಸರ್ವಧರ್ಮ ಸಹಿಷ್ಣುತೆ, ತ್ಯಾಗ, ಬಲಿದಾನ, ಪರಿಶ್ರಮದಿಂದ ಪಡೆದ ಸ್ವಾತಂತ್ರ್ಯವನ್ನು ನಾವು ಈಗ ಅನುಭವಿಸುತ್ತಿದ್ದೇವೆ ಎಂದರು.

           ಈ ವಿಶೇಷ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಸಿರು ಕರ್ನಾಟಕ ಯೋಜನೆ ಚಾಲನೆಯಾಗುತ್ತಿದ್ದು, ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಎನ್ನುವುದು ಹಸಿರು ಕರ್ನಾಟಕದ ಧ್ಯೇಯವಾಗಿದೆ. ಬೆಟ್ಟ ಗುಡ್ಡಗಳಲ್ಲಿ ಪ್ರತಿಯೊಬ್ಬ ನಾಗರಿಕ ವಿಶೇಷವಾಗಿ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಿಡವನ್ನು ನೆಟ್ಟು ಅದರ ಪೋಷಣೆಯನ್ನು ಮಾಡುವ ಮುಖಾಂತರ ಪರಿಸರ ವೃದ್ಧಿಯಾಗುವುದರಿಂದ ಮಳೆಚಿiÀiÁಗಿ, ಅಂತರ್ಜಲ ವೃದ್ಧಿಯಾಗುತ್ತದೆ. ಇದೇ ರೀತಿ ಬಯಲು ಮುಕ್ತ ಶೌಚಾಲಯ, ಸಾರ್ವತ್ರಿಕ ಶಿಕ್ಷಣ, ಮಕ್ಕಳ ಹಕ್ಕು ಕಾಯ್ದೆಗಳು, ಸ್ತ್ರೀ ಸಬಲೀಕರಣ, ಹಸಿವು ಮುಕ್ತ ಕಾರ್ನಾಟಕ, ಪ್ರತಿಯೊಬ್ಬರಿಗೂ ಸೂರು ಸೇರಿದಂತೆ ಇನ್ನೂ ಹತ್ತು ಹಲವಾರು ಯೋಜನೆಗಳು ಸಾಕಾರಗೊಳಿಸಲು ನಾವೆಲ್ಲರೂ ಶ್ರಮಿಸೋಣ. ಅಹಿಂಸೆ, ಶಾಂತಿ, ಸಹನೆ, ಆಧ್ಯಾತ್ಮ, ಭಾವೈಕ್ಯತೆ, ಸರ್ವಧರ್ಮ ಸಹಿಷ್ಣುತೆ ಉಳ್ಳ ದೇಶ ಕಟ್ಟೋಣ ಎಂದರು.

            ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ. ಅಧ್ಯಕ್ಷ ಕೆಂಪರಾಮಯ್ಯ, ಭವ್ಯ ಪರಂಪರೆ ಹೊಂದಿದ್ದ ದೇಶವನ್ನು ಲಕ್ಷಾಂತರ ದೇಶ ಪ್ರೇಮಿ ಹೋರಾಟಗಾರರ ಶ್ರಮಬಲಿದಾನದಿಂದ ಪಡೆದಿರುವ ಸ್ವಾತಂತ್ರ್ಯವನ್ನು ಪ್ರಜ್ಞಾವಂತ ನಾಗರಿಕರಾದ ನಾವು ಉಳಿಸಿ ಮುನ್ನಡೆಸಬೇಕಾಗಿದೆ. ರಾಜ್ಯದಲ್ಲಿ ಒಂದು ಕಡೆ ಪ್ರವಾಹದಿಂದ ನಷ್ಟ ಉಂಟಾಗುತ್ತಿದ್ದರೆ, ಮತ್ತೊಂದು ಕಡೆ ಕೆಲ ಜಿಲ್ಲೆಗಳು ಮಳೆಯಿಲ್ಲದೆ ಭೀಕರ ಬರಗಾಲ ತಾಂಡವವಾಡುತ್ತಿದ್ದು ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದರು.

ಹಸಿರು ಕರ್ನಾಟಕ ಯೋಜನೆಗೆ ಚಾಲನೆ:

              ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು ನೀಡುವ ಹಸಿರು ಕರ್ನಾಟಕ ಯೋಜನೆಗೆ ಅರಣ್ಯ ಇಲಾಖೆಯ ಆರ್.ಫ್.ಓ ಸತೀಶ್ ಶಾಲಾ ವಿದ್ಯಾರ್ಥಿಗಳಿಗೆ ಸಸಿ ನೆಟ್ಟು ಬೆಳೆಸಲು ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಸಸಿಗಳನ್ನು ವಿತರಿಸಿ ಸರ್ಕಾರಿ ಜಮೀನುಗಳಲ್ಲಿ ಗಿಡನೆಡುವ ಮೂಲಕ ಈ ಬೃಹತ್ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜು ವಿಧ್ಯಾರ್ಥಿಗಳು, ಸಂಘ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳು, ಸರ್ವಾಜನಿಕರು ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

             ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಪ್ರೇಮಾ ಮಹಾಲಿಂಗಪ್ಪ, ಶಿವರಾಮಯ್ಯ, ತಾ.ಪಂ.ಉಪಾಧ್ಯಕ್ಷೆ ನರಸಮ್ಮ ನರಸಿಂಹಮೂರ್ತಿ, ಸದಸ್ಯರಾದ ವೆಂಕಟಪ್ಪ, ಬೋರಣ್ಣ, ರಂಗಮ್ಮ, ಆರಕ್ಷಕ ವೃತ್ತ ನಿರೀಕ್ಷಕ ಎಸ್.ಮುನಿರಾಜು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ಎಇಇ ಜಗದೀಶ್, ಬಿಇಓ ಚಂದ್ರಶೇಖರ್, ಪ.ಪಂ.ಮುಖ್ಯಾಧಿಕಾರಿ ಶ್ರೀನಿವಾಸ್, ಪಿಎಸ್‍ಐ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರಕ್ಯಾತರಾಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಘು, ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಗೋವಿಂದರಾಜು, ಮೈಲಾರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link