ಸ್ವಾರ್ಥಕ್ಕೆ ನೈಸರ್ಗಿಕ ಸಂಪತ್ತು ನಾಶ;ಶಂಕರಮೂರ್ತಿ

ಚಿತ್ರದುರ್ಗ:

     ಮನುಷ್ಯನ ಸ್ವಾರ್ಥಕ್ಕೆ, ನಿಸ್ವಾರ್ಥ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆಎಂದು ಸ್ಫೂರ್ತಿ ವಿಕಲಚೇತನರ ಸಂಸ್ಥೆಯತುರುವನೂರು ಶಂಕರಮೂರ್ತಿ ಹೇಳಿದರು.

     ಕೆ.ಎಸ್.ಆರ್.ಟಿ.ಸಿ. ಡಿಪೋರಸ್ತೆಯಲ್ಲಿಸ್ಫೂರ್ತಿ ವಿಕಲಚೇತನರ ಸಂಸ್ಥೆಯ ವತಿಯಿಂದಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ನೈಸರ್ಗಿಕ ಸಂಪತ್ತಾದ ಗಾಳಿ, ಬೆಳಕು, ನೀರು, ರಸ್ತೆ ಸೇರಿಜನರಿಗೆ ಅನುಕೂಲ ಮಾಡುವಂತಹ ಪ್ರಕೃತಿಯನ್ನು ಮನುಷ್ಯತನ್ನ ಸ್ವಾರ್ಥಕ್ಕೆ ನಾಶ ಮಾಡುತ್ತಿದ್ದಾನೆಎಂದು ಹೇಳಿದರು.

       ಪರಿಸರದ ಬಗ್ಗೆ ಅತಿಹೆಚ್ಚು ಮಾತನಾಡುವಂತಹ ಮನುಷ್ಯಇಂದು ಪ್ರಕೃತಿಯನ್ನು ನಾಶ ಮಾಡಿ, ಬದುಕುವಂತಹ ಪರಿಸ್ಥಿತಿಯನ್ನು ಕಂಡುಕೊಂಡಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿಗಿಡ, ಮರ, ಪರಿಸರ, ಕಾಡುಗಳನ್ನು ನಿತ್ಯ ನಾಶ ಮಾಡಿ, ಅಭಿವೃದ್ಧಿಎಂದು ಹೇಳಿಕೊಳ್ಳುವ ಮನುಷ್ಯರು ಅವುಗಳನ್ನು ಪುನಃ ಬೆಳೆಸುವಂತಹ ಯಾವುದೇ ಯೋಜನೆಗಳನ್ನು ರೂಪಿಸಿಕೊಂಡಿಲ್ಲ ಎಂದು ವಿಷಾದಿಸಿದರು.

     ಪೊಲೀಸ್‍ ಇನ್ಸ್‍ಪೆಕ್ಟರ್ ಗಂಗಲಿಂಗಯ್ಯ ಮಾತನಾಡಿ, ಅಂಗವಿಕಲರು ಸಹ ಪರಿಸರದ ಪ್ರೀತಿ ಬೆಳೆಸಿಕೊಂಡಿರುವುದು ಅಚ್ಚರಿಯ ಸಂಗತಿ.ಸಹಜವಾದ ಮನುಷ್ಯನೇ ವ್ಯರ್ಥವಾಗಿ ಕಾಲಹರಣ ಮಾಡುತ್ತಿರುವ ಸಂದರ್ಭದಲ್ಲಿಅಂಗವಿಕಲರ ಪರಿಸರ ಕಾಳಜಿ ಮೆಚ್ಚುವಂತದ್ದುಎಂದು ಹೇಳಿದರು.

       ಸ್ಫೂರ್ತಿ ವಿಕಲಚೇತನರ ಸಂಸ್ಥೆಯ ನಿರ್ದೇಶಕರಾದ ತಿಪ್ಪಮ್ಮಅವರು ಮಾತನಾಡಿ, ಸ್ಫೂರ್ತಿ ವಿಕಲಚೇತನರ ಸಂಸ್ಥೆಯನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಈ ಸಂಸ್ಥೆಯಿಂದ ಅಂಗವಿಕಲರಿಗೆ ವೃತ್ತಿ ತರಬೇತಿಯನ್ನು ನೀಡುವ ಮೂಲಕ ಅಲ್ಲಲ್ಲಿ ಕರ್ತವ್ಯಕ್ಕೆ ಸೇರಿಸುವಂತಹ ಕೆಲಸವನ್ನು ಸಹ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಂಗಸ್ವಾಮಿ, ಸಿವಿಲ್ ಪೊಲೀಸ್‍ ಕಾನ್ಸ್‍ಟೇಬಲ್ ರಂಗನಾಥ್, ಸ್ಫೂರ್ತಿ ವಿಕಲಚೇತನರ ಸಂಸ್ಥೆಯ ಶ್ರೀಮತಿ ಬಿಬಿಜಾನ್ ಸೇರಿ ಹಲವು ಜನ ವಿಕಲಚೇತನರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap