ಸ್ವಾವಲಂಭಿಯ ಬದುಕು ಕಟ್ಟಿಕೊಳ್ಳಬೇಕು

ಚಿತ್ರದುರ್ಗ:

           ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ನೀಡುವ ಕೌಶಲ್ಯ ತರಬೇತಿಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸ್ವಾವಲಂಭಿಗಳಾಗಿ ಬದುಕಿ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥಸ್ವಾಮಿ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

              ಚಿತ್ರ ಡಾನ್‍ಬೋಸ್ಕೋ ದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯ ತರಬೇತಿ, ಪೋಷಕರ ಸಭೆ ಹಾಗೂ ಚಿತ್ರ ಡಾನ್‍ಬೋಸ್ಕೋ ಹೊಸ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

              ಪೈಪೋಟಿ ಯುಗದಲ್ಲಿ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ತುಂಬಾ ಕಷ್ಟ. ಹಾಗಂತ ನಿರಾಶರಾಗುವುದು ಬೇಡ. ದೈಹಿಕ ಮತ್ತು ಲಿಖಿತ ಪರೀಕ್ಷೆಗಳನ್ನು ನಡೆಸಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಬೇಕಾಗಿರುವುದರಿಂದ ನಿಜವಾಗಿಯೂ ಯಾರಲ್ಲಿ ಕೌಶಲ್ಯ ಹಾಗೂ ಪ್ರತಿಭೆ ಇರುತ್ತದೋ ಅಂತಹವರು ಮಾತ್ರ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.

              ಮಕ್ಕಳಿಗೆ ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದು ಪೋಷಕರು ನಿರಾಶರಾಗುವುದು ಸಹಜ. ಚಿತ್ರ ಡಾನ್‍ಬೋಸ್ಕೊ ಮೊದಲಿನಿಂದಲೂ ಕೌಶಲ್ಯ ತರಬೇತಿಗಳನ್ನು ನೀಡುತ್ತಾ ಬರುತ್ತಿದೆ. ಗ್ರಾಮೀಣ ಪ್ರದೇಶದ ಯುವಕ/ಯುವತಿಯರು ಇದರ ಪ್ರಯೋಜನ ಪಡೆದುಕೊಂಡು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿಕೊಳ್ಳಿ ಎಂದು ಸಲಹೆ ನೀಡಿದರು.

             ನಿರುದ್ಯೋಗ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಸಮಾಜಕ್ಕೆ ಇದೊಂದು ದೊಡ್ಡ ಹೊರೆಯಾಗಿದೆ. ಅದಕ್ಕಾಗಿ ಇಂತಹ ಕೌಶಲ್ಯ ತರಬೇತಿಗಳು ಅತಿ ಮುಖ್ಯವಾಗಿ ಬೇಕು. ಸ್ವಾವಲಂಭಿ ಜೀವನದಲ್ಲಿ ಸ್ವತಂತ್ರ, ಆತ್ಮತೃಪ್ತಿ ಇರುತ್ತದೆ. ಅದಕ್ಕಾಗಿ ತರಬೇತಿಗಳನ್ನು ಪಡೆದುಕೊಂಡು ನಿಮ್ಮ ನಿಮ್ಮ ಜೀವನವನ್ನು ಹಸನು ಮಾಡಿಕೊಳ್ಳಿ ಎಂದು ಹೇಳಿದರು.

               ಎನ್.ಆರ್.ಎಂ.ಎಲ್.ಅಧಿಕಾರಿ ಯೋಗೇಶ್ ಮಾತನಾಡಿ ಡಾನ್‍ಬೋಸ್ಕೋ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದುದು. ಸ್ಪರ್ಧಾತ್ಮಕ ಯುಗದಲ್ಲಿ ನಿರುದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಬೇಕು.ದೇಶದ ನೂರು ಕೋಟಿಗೂ ಹೆಚ್ಚು ಜನಸಂಖ್ಯೆಯಲ್ಲಿ ಶೇ.52 ರಷ್ಟು ಯುವ ಸಮೂಹವಿದೆ. ಮಾನವ ಸಂಪನ್ಮೂಲ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗಬೇಕಾದರೆ ಎಲ್ಲರಿಗೂ ಉದ್ಯೋಗ ಬೇಕೆ ಬೇಕು ಎಂದರು.

              ಜಾಗತೀಕರಣ, ಖಾಸಗೀಕರಣ, ಉದಾರೀಕರಣದಲ್ಲಿ ಎಲ್ಲೆಡೆ ಕೈಗಾರಿಕೆಗಳು ಸೃಷ್ಟಿಯಾಗುತ್ತಿವೆ. ಇನ್ನೊಂದೆಡೆ ಕೌಶಲ್ಯದ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ಇವೆರಡಕ್ಕೂ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಚಿತ್ರ ಡಾನ್‍ಬೋಸ್ಕೋ ನೀಡುತ್ತಿರುವ ಕೌಶಲ್ಯ ತರಬೇತಿಯನ್ನು ಸರಿಯಾಗಿ ಬಳಸಿಕೊಂಡು ಸ್ವಂತ ದುಡಿಮೆಗೆ ದಾರಿ ಕಂಡುಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.

            ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿಗಳ ಅವಶ್ಯಕತೆಯಿದೆ. ಶಿಕ್ಷಣವಂತರು, ಬುದ್ದಿವಂತರು ಜಾಸ್ತಿಯಾಗುತ್ತಿದ್ದಾರೆ. ಆದರೆ ಕೌಶಲ್ಯದ ಅಭಾವದಿಂದ ಉದ್ಯೋಗಕ್ಕಾಗಿ ಸಂದರ್ಶನವನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮಥ್ರ್ಯ ಇಲ್ಲದಂತಾಗಿದೆ. ಉದ್ಯೋಗವನ್ನು ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಇರುವ ಜಾಗದಲ್ಲಿಯೇ ಉದ್ಯೋಗ ಬೇಕು ಎನ್ನುವುದು ತಪ್ಪು. ಬರಗಾಲದಿಂದ ಗ್ರಾಮೀಣರ ಬದುಕು ಕಷ್ಟವಾಗಿದೆ. ಸಂಘ ಸಂಸ್ಥೆಗಳ ಜೊತೆ ಸರ್ಕಾರವೂ ಅನೇಕ ತರಬೇತಿಗಳನ್ನು ನೀಡುತ್ತಿದೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

              ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಜೋಸೆಫ್ ಸ್ಯಾಮ್ಯೂಲ್, ಚಿತ್ರ ಡಾನ್‍ಬೋಸ್ಕೋ ನಿರ್ದೇಶಕ ಫಾದರ್ ಸೋನಿಚನ್‍ಮ್ಯಾಥ್ಯೂ, ಬೋಗರಾಜ್ ವೇದಿಕೆಯಲ್ಲಿದ್ದರು.ಡಾನ್‍ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ವರ್ಗಿಸ್ ಪಳ್ಳಿಪುರಂ ಅಧ್ಯಕ್ಷತೆ ವಹಿಸಿದ್ದರು.ಚಿತ್ರಡಾನ್‍ಬೋಸ್ಕೋ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.ಮಾನವ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ, ಮಿತ ಆಹಾರ, ನೀರಿನ ಬಳಕೆ ಹಾಗೂ ಮೂಲ ಕಾನೂನಿನ ಕುರಿತು ಅರಿವು ಕಾರ್ಯಕ್ರಮ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link